Advertisement

Cancer: ಚರ್ಮದ ಕ್ಯಾನ್ಸರ್‌ ಗುಣಪಡಿಸಲು ಸೋಪ್‌ ಸಂಶೋಧಿಸಿದ 14ರ ಬಾಲಕ !

09:53 PM Oct 25, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ 14 ವರ್ಷದ ಬಾಲಕ ಹೇಮನ್‌ ಬೆಕಲೆ ಚರ್ಮದ ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಹಾಯಕವಾಗುವ ಸೋಪ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಅಮೆರಿಕದ ಉನ್ನತ ಯುವ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಸಾಬೂನಿನ ವೆಚ್ಚವೇ ಕೇವಲ 10 ಡಾಲರ್‌ಗಿಂತ (831 ರೂ.) ಕಡಿಮೆಯದ್ದಾಗಿದೆ.

Advertisement

ಚರ್ಮದ ಜೀವಕೋಶಗಳನ್ನು ಸಕ್ರಿಯಗೊಳಿಸುವ ಮೂಲಕ ಅವುಗಳು ಕ್ಯಾನ್ಸರ್‌ ಕಾರಕ ಜೀವಕೋಶದ ವಿರುದ್ಧ ಹೋರಾಡಲು ಸಹಾಯಕವಾಗುವಂಥ ಪದಾರ್ಥಗಳನ್ನು ಬಳಸಿ, ಸೋಪ್‌ ತಯಾರಿಸಿರುವುದಾಗಿ ಬೆಕಲೆ ಹೇಳಿದ್ದಾರೆ. ಇಥಿಯೋಪಿಯಾದಲ್ಲಿ ವಾಸವಾಗಿದ್ದಾಗ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ನಿರಂತರವಾಗಿ ಕೆಲಸ ಮಾಡುವವರನ್ನು ನೋಡಿದಾಗ ಇಂಥದ್ದೊಂದು ಆಲೋಚನೆ ಮೂಡಿತು. ಈ ಹಿನ್ನೆಲೆಯಲ್ಲಿ ಚರ್ಮದ ಕ್ಯಾನ್ಸರ್‌ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಜನರು ಶಾಶ್ವತವಾಗಿ ಬಳಸಬಹುದಾದ, ಕಡಿಮೆ ವೆಚ್ಚವೂ ಆಗಿರಬಹುದಾದಂಥ ಸೋಪನ್ನು ಅಭಿವೃದ್ಧಿ ಪಡಿಸಲಾಗಿದೆ. ಬಹು ಹಂತದ ಪ್ರಯೋಗಗಳು ಯಶಸ್ವಿಯಾದ ಬಳಿಕ ಸೋಪ್‌ ಅನ್ನು ಪರಿಚಯಿಸಿದ್ದಾಗಿಯೂ ಬೆಕೆಲೆ ಹೇಳಿದ್ದಾರೆ.

ಫೇರ್‌ಫ್ಯಾಕ್ಸ್‌ ಕೌಂಟಿಯ ಫ್ರಾಸ್ಟ್‌ ಮಿಡಲ್‌ ಸ್ಕೂಲ್‌ನಲ್ಲಿ ಓದುತ್ತಿರುವ ಬೆಕಲೆ, 2023ರ ಯಂಗ್‌ಸೈಂಟಿಸ್ಟ್‌ ಚಾಲೆಂಜ್‌ನಲ್ಲಿ ಸ್ಪರ್ಧಿಸಿ ಇತರ 9 ಸ್ಪರ್ಧಿಗಳನ್ನು ಪರಾಜಿತಗೊಳಿಸಿ 25,000 ಡಾಲರ್‌ಗಳ ಬಹುಮಾನವನ್ನು ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next