Advertisement

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಜಮ್ಮು|ಕಣಿವೆ ನಾಡಿನಲ್ಲಿ ಬಾನೆತ್ತರಕ್ಕೆ ಹಾರಿದ ತಿರಂಗಾ  

04:04 PM Aug 15, 2021 | Team Udayavani |

ಶ್ರೀನಗರ : 75 ನೇ ಸ್ವಾತಂತ್ರ್ಯೋತ್ಸವನ್ನು ಭಾರತದ ಮುಕುಟಮಣಿಯಂತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ.

Advertisement

ಇಲ್ಲಿಯ ಶ್ರೀನಗರದಲ್ಲಿರುವ ಹರಿ ಪ್ರಭಾತ್ ಎಂಬಲ್ಲಿ 100 ಅಡಿ ಎತ್ತರಕ್ಕೆ ರಾಷ್ಟ್ರಧ್ವಜಾರೋಹಣ ಮಾಡಿರುವುದು ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಧ್ವಜಾರೋಹಣದ ಬಳಿಕ ಮಾಧ್ಯಮಗಳಿಗೆ ಮಾತನಾಡಿರುವ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ, ಇದು ಐತಿಹಾಸಿಕ ಕ್ಷಣ. 100 ಫೀಟ್ ಎತ್ತರದಲ್ಲಿ ಭಾರತ ದೇಶದ ಧ್ವಜ ಹಾರುತ್ತಿದೆ. ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳ ಸಹಯೋಗದಲ್ಲಿ ಧ್ವಜಾರೋಹಣ ಯಶಸ್ವಿಯಾಗಿ ಸಂಭ್ರಮ-ಸಡಗರದಿಂದ ನೆರವೇರಿದೆ. ಇದು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಶ್ರಮಿಸುವ ಅದರಲ್ಲೂ ಯುವಕರಿಗೆ ಸ್ಫೂರ್ತಿ ತುಂಬಲಿದೆ ಎಂದಿದ್ದಾರೆ.

ಇನ್ನು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ರಕ್ಷಣ ಇಲಾಖೆ, ದೇಶದ ಐಕ್ಯತೆ, ಸಮಗ್ರತೆ ಎತ್ತಿಹಿಡಿಯುವ ಸಲುವಾಗಿ ದೇಶದ 75 ಉನ್ನತ ಪರ್ವತ, ಕಣಿವೆಗಳಲ್ಲಿ ತಿರಂಗಾ ಧ್ವಜ ಹಾರಿಸಿದ್ದಾರೆ. ಲಡಾಖ್‌ನ ಸಾಸೆರ್ಲಾ ಪಾಸ್‌, ಕಾರ್ಗಿಲ್‌ನ ಸ್ಟಾಕೊ³ಚಾನ್‌ ಕಣಿವೆ, ಸಾಟೋಪಂಥ್‌, ಹರ್ಷಿಲ್‌, ಉತ್ತರಾಖಂಢ್‌, ಫಿಮ್‌, ಸಿಕ್ಕಿಂ, ತವಾಂಗ್‌ನ  ಪಾಯಿಂಟ್‌ 4493ಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next