Advertisement

Snake Bite: 9ನೇ ತರಗತಿ ವಿದ್ಯಾರ್ಥಿಗೆ 9 ಸಲ ಕಚ್ಚಿದ ಸರ್ಪ!

12:12 AM Aug 30, 2023 | Team Udayavani |

ವಾಡಿ: ಹಾವು ಕಣ್ಣಿಗೆ ಬಿದ್ದರೆ ಸಾಕು ಎದೆಯೊಡೆಯುತ್ತದೆ. ಇನ್ನೂ ಸರ್ಪ ಕಚ್ಚಿತೆಂದರೆ ಹೃದಯದ ಬಡಿತವೇ ನಿಂತು ಬಿಡುತ್ತದೆ. ಆದರೆ ಇಲ್ಲೊಬ್ಬ ಹುಡುಗನಿಗೆ ಹಾವು ಪದೇ ಪದೆ ಕಚ್ಚುತ್ತಿದ್ದು, ಅದರ ಕಾಟಕ್ಕೆ ಬೇಸತ್ತು ಊರು ತೊರೆದು ಮತ್ತೂಂದು ಊರಿಗೆ ಹೋಗಿ ನೆಲೆಸಿದರೂ ಅಲ್ಲಿಯೂ ಕಚ್ಚಿದೆ. ಬರೋಬ್ಬರಿ ಒಂಬತ್ತು ಸಲ ಹಾವು ಕಚ್ಚಿದ್ದು, ಬಾಲಕನ ಕುಟುಂಬಸ್ಥರ ನೆಮ್ಮದಿ ಕೆಡಿಸಿದೆ.

Advertisement

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಹಳಕರ್ಟಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ವಿಜಕುಮಾರ ರಾವೂರಕರ ಅವರ ಪುತ್ರ ರಾವೂರ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಒಂಬತ್ತನೇ ತರಗತಿ ಯಲ್ಲಿ ಓದುತ್ತಿರುವ ಪ್ರಜ್ವಲ್‌ ವಿಜಯಕುಮಾರ (13) ಪದೇ ಪದೆ ಹಾವು ಕಡಿತಕ್ಕೊಳಗಾಗುತ್ತಿದ್ದ. ಆರಂಭದಲ್ಲಿ ಆರು ಸಲ ಮನೆಯಲ್ಲೇ ಕಾಲಿಗೆ ಕಡಿದಿತ್ತು. ಇದರಿಂದ ಬೇಸತ್ತು ಊರು ತೊರೆದು ವಾಡಿ ಪಟ್ಟಣದ ಬಳಿರಾಮ ಚೌಕ್‌ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರೂ ಬಿಡದ ಸರ್ಪ ಮೂರು ಸಲ ಕೈ ಬೆರಳಿಗೆ ಕಡಿದಿದೆ. ಆ. 26ರಂದು ಬಾಲಕನಿಗೆ ಹಾವು ಕಡಿದಿದ್ದು, ಸದ್ಯ ಕಲಬುರಗಿ ಜಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಒಂಬತ್ತು ಬಾರಿ ಹಾವು ಕಡಿದರೂ ಮಗನ ಪ್ರಾಣಕ್ಕೆ ತೊಂದರೆಯಾಗಿಲ್ಲ. ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾನೆ. ಈ ಹಾವುಗಳು ನಮ್ಮ ಮಗನ ಬೆನ್ನಟ್ಟಿದ್ದೇಕೆ ಎಂಬುದೇ ಅರ್ಥ ವಾಗುತ್ತಿಲ್ಲ ಎಂದು ಆತನ ತಂದೆ ವಿಜಕುಮಾರ ರಾವೂರಕರ “ಉದಯವಾಣಿ’ ಜತೆ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next