Advertisement

ಸತತ 9 ಗೆಲುವು: ಭಾರತದ ಜಂಟಿ ದಾಖಲೆ

08:59 AM Sep 26, 2017 | Team Udayavani |

ಇಂದೋರ್‌: ಇಂದೋರ್‌ನಲ್ಲಿ ಆಸ್ಟ್ರೇಲಿಯವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಭಾರತ ಸರಣಿಯನ್ನು ವಶಪಡಿಸಿಕೊಂಡಿತಲ್ಲದೇ, ಸತತ 9 ಏಕದಿನ ಪಂದ್ಯಗಳನ್ನು ಗೆದ್ದ ತನ್ನ ದಾಖಲೆಯನ್ನು ಸರಿದೂಗಿಸಿತು.  2008ರ ನವೆಂಬರ್‌ ಹಾಗೂ 2009ರ ಫೆಬ್ರವರಿ ನಡುವಿನ ಅವಧಿಯಲ್ಲೂ ಭಾರತ ಸತತ 9 ಪಂದ್ಯಗಳನ್ನು ಜಯಿಸಿತ್ತು. ಅಂದು ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ 4 ಪಂದ್ಯ ಹಾಗೂ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.

Advertisement

ಈ ಗೆಲುವಿನ ಓಟದ ವೇಳೆ ವಿರಾಟ್‌ ಕೊಹ್ಲಿ ಸತತ ಅತ್ಯಧಿಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮಹೇಂದ್ರ ಸಿಂಗ್‌ ಧೋನಿ ಅವರ ಭಾರತೀಯ ನಾಯಕತ್ವದ ದಾಖಲೆಯನ್ನು ಸರಿದೂಗಿಸಿದರು (9 ಪಂದ್ಯ). ಧೋನಿ 2008-09ರ ಅವಧಿಯಲ್ಲಿ 
ಈ ದಾಖಲೆ ನಿರ್ಮಿಸಿದ್ದರು. ಇನ್ನೊಂದೆಡೆ ಆಸ್ಟ್ರೇಲಿಯ ತವರಿನಾಚೆ ಸತತ 11 ಏಕದಿನ ಪಂದ್ಯಗಳಲ್ಲಿ ಸೋಲನುಭವಿಸಿತು!

Advertisement

Udayavani is now on Telegram. Click here to join our channel and stay updated with the latest news.

Next