Advertisement

ಜಿಲ್ಲೆಯ 98 ಜನರಿಗೆ ಸೋಂಕು ಪತ್ತೆ

12:24 PM Aug 14, 2020 | Suhan S |

ಗದಗ: ಜಿಲ್ಲೆಯಲ್ಲಿ ಗುರುವಾರ 98 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 2645ಕ್ಕೆ ಏರಿದೆ. ಅದರಲ್ಲಿ ಗುರುವಾರ 50 ಜನ ಸೇರಿದಂತೆ 1446 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ಗದಗ-38, ಮುಂಡರಗಿ-14, ನರಗುಂದ-22, ರೋಣ-06, ಶಿರಹಟ್ಟಿ-15, ಹೊರಜಿಲ್ಲೆಯ ಮೂವರಿಗೆ ಹೊಸದಾಗಿ ಕೋವಿಡ್ ಸೋಂಕು ಖಚಿತವಾಗಿದೆ.

Advertisement

ಮತ್ತಿಬ್ಬರು ಬಲಿ: ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತಿಬ್ಬರು ಬಲಿಯಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಒಟ್ಟು 52 ಜನರು ಸೊಂಕಿನಿಂದ ಮೃತಪಟ್ಟಂತಾಗಿದೆ. ಮುಂಡರಗಿ ಪಟ್ಟಣದ ಜೆ.ಎಚ್‌. ಪಟೇಲ್‌ ನಗರದ ನಿವಾಸಿ 60 ವರ್ಷದ ವೃದ್ಧ(ಪಿ-198969) ಆ. 11ರಂದು ಸೋಂಕು ದೃಢಪಟ್ಟಿದ್ದು, ಸಕ್ಕರೆ ಕಾಯಿಲೆ ಹಾಗೂ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ. ಗದಗ ನಗರದ ವಿಶ್ವೇಶ್ವರಯ್ಯ ನಗರದ ನಿವಾಸಿ 55 ವರ್ಷದ ಮಹಿಳೆ(ಪಿ-145148)ಗೆ ಆ. 2ರಂದು ಸೋಂಕು ದೃಢಪಟ್ಟಿದ್ದು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಆ. 11ರಂದು ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ತಿಳಿಸಿದ್ದಾರೆ.

ರೋಣ ಆಸ್ಪತ್ರೆ ಸೀಲ್‌ಡೌನ್‌ :  ಶ್ರೀನಗರ ಬಡಾವಣೆ ಕೊರೊನಾ ಸೋಂಕಿತ ಗುರುವಾರ ಪಟ್ಟಣದ ಭಾರತರತ್ನ ಡಾ| ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಶನಿವಾರ ಬೆಳಗಿನವರೆಗೆ ಆಸ್ಪತ್ರೆ ಸೀಲ್‌ಡೌನ್‌ ಮಾಡಲಾಗಿದೆ. ಸೊಂಕಿತನ ಮೃತ ದೇಹವನ್ನು ಕೋವಿಡ್‌-19 ನಿಯಮಾವಳಿಯಂತೆ ಆಸ್ಪತ್ರೆ, ಪುರಸಭೆ ಸಿಬ್ಬಂದಿ ಅಂತ್ಯಕ್ರಿಯೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next