ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಸಮುದಾಯ ಭವನ ಸೇರಿದಂತೆ ಒಟ್ಟು 978 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು, 32.21 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ.
ಜಿಲ್ಲೆಯ ಒಟ್ಟು 653 ಪ್ರಾಥಮಿಕ ಶಾಲೆಗಳ 1444 ಕೊಠಡಿಗಳು ನೆರೆ ಮತ್ತು ಮಳೆಯಿಂದ ಕುಸಿದಿದ್ದು, 26.64 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಒಟ್ಟು 275 ಅಂಗನವಾಡಿ ಕಟ್ಟಡಗಳು ಕುಸಿದಿದ್ದು, 2.75ಕೋಟಿ ರೂ.ಗಳಷ್ಟು ಹಾನಿಯಾಗಿದೆ. 24 ವಿವಿಧ ಭವನಗಳಿಗೆ ಧಕ್ಕೆಯಾಗಿದ್ದು, 14ಲಕ್ಷ ರೂ.ಗಳಷ್ಟು ಹಾನಿಯಾಗಿದೆ.
ಸರ್ಕಾರಿ ಕಟ್ಟಡಗಳಿಗೆ ಉಂಟಾದ ಹಾನಿಗೆ ಸಂಬಂಧಿಸಿ ಹಾವೇರಿ ತಾಲೂಕಿನಲ್ಲಿ 594ಲಕ್ಷ ರೂ., ರಾಣಿಬೆನ್ನೂರು ತಾಲೂಕಿನಲ್ಲಿ 201ಲಕ್ಷ ರೂ., ಬ್ಯಾಡಗಿ ತಾಲೂಕಿನಲ್ಲಿ 198ಲಕ್ಷ ರೂ., ಹಿರೇಕೆರೂರು ತಾಲೂಕಿನಲ್ಲಿ 505ಲಕ್ಷ ರೂ., ಸವಣೂರು ತಾಲೂಕಿನಲ್ಲಿ 532ಲಕ್ಷ ರೂ., ಶಿಗ್ಗಾವಿ ತಾಲೂಕಿನಲ್ಲಿ 581ಲಕ್ಷ ರೂ., ಹಾನಗಲ್ಲ ತಾಲೂಕಿನಲ್ಲಿ 382ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಒಟ್ಟು 29.55ಕೋಟಿ ರೂ.ಗಳಷ್ಟು ನಷ್ಟವಾಗಿದ್ದು 15.42ಕೋಟಿ ರೂ.ಗಳ ಪರಿಹಾರ ನಿರೀಕ್ಷಿಸಲಾಗಿದೆ.
ಶಾಲಾ ಕೊಠಡಿ ಹಾನಿ: ಹಾವೇರಿ ತಾಲೂಕಿನ 97 ಪ್ರಾಥಮಿಕ ಶಾಲೆಗಳಿಗೆ ಸಂಬಂಧಪಟ್ಟ 265 ಕೊಠಡಿಗಳು, ರಾಣಿಬೆನ್ನೂರು ತಾಲೂಕಿನ 42 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 91, ಬ್ಯಾಡಗಿ ತಾಲೂಕಿನ 47 ಪ್ರಾಥಮಿಕ ಶಾಲೆಗಳಿಗೆ ಸಂಬಂಧಪಟ್ಟ 87, ಹಿರೇಕೆರೂರು ತಾಲೂಕಿನ 113 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 226, ಸವಣೂರು ತಾಲೂಕಿನ 80 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 251, ಶಿಗ್ಗಾವಿ ತಾಲೂಕಿನ 132 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 272, ಹಾನಗಲ್ಲ ತಾಲೂಕಿನ 140 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 252 ಕೊಠಡಿಗಳಿಗೆ ನೆರೆ, ಮಳೆ ನೀರಿನಿಂದ ಹಾನಿಯಾಗಿದೆ. ಶಾಲಾ ಕೊಠಡಿಗಳಿಗೆ ಸಂಬಂಧಿಸಿ 26.64 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು 12.51ಕೋಟಿ ರೂ. ಪರಿಹಾರ ನಿರೀಕ್ಷಿಸಲಾಗಿದೆ.
Advertisement
ಜಿಪಂ ಅಧೀನದಲ್ಲಿರುವ 952 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು, 29.55 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದರೆ, ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ 26 ಕಟ್ಟಡಗಳು ಕುಸಿದು 2.66 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ.
Related Articles
Advertisement
ಅಂಗನವಾಡಿಗೆ ಹಾನಿ: ಜಿಲ್ಲೆಯ 275 ಅಂಗನವಾಡಿ ಕೊಠಡಿಗಳಿಗೆ ಹಾನಿಯಾಗಿದೆ. ಹಾವೇರಿ ತಾಲೂಕಿನ 57 ಅಂಗನವಾಡಿಗಳಿಗೆ ಸಂಬಂಧಿಸಿ 63.30ಲಕ್ಷ ರೂ., ರಾಣಿಬೆನ್ನೂರು ತಾಲೂಕಿನ 48 ಅಂಗನವಾಡಿಗಳಿಗೆ ಸಂಬಂಧಿಸಿ 19.64ಲಕ್ಷ ರೂ., ಬ್ಯಾಡಗಿ ತಾಲೂಕಿನ 19 ಅಂಗನವಾಡಿಗಳಿಗೆ ಸಂಬಂಧಿಸಿ 23 ಲಕ್ಷ ರೂ., ಹಿರೇಕೆರೂರು ತಾಲೂಕಿನ 70 ಅಂಗನವಾಡಿಗಳಿಗೆ ಸಂಬಂಧಿಸಿ 53.24ಲಕ್ಷ ರೂ., ಸವಣೂರು ತಾಲೂಕಿನ 19 ಅಂಗನವಾಡಿಗಳಿಗೆ ಸಂಬಂಧಿಸಿ 28ಲಕ್ಷ ರೂ, ಶಿಗ್ಗಾವಿ ತಾಲೂಕಿನ 23 ಅಂಗನವಾಡಿಗಳಿಗೆ ಸಂಬಂಧಿಸಿ 34 ಲಕ್ಷ ರೂ., ಹಾನಗಲ್ಲ ತಾಲೂಕಿನ 39 ಅಂಗನವಾಡಿಗಳಿಗೆ ಸಂಬಂಧಿಸಿ 56ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಒಟ್ಟು 2.77 ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಲಾಗಿದ್ದು 2.76ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ.
ಭವನಗಳಿಗೆ ಧಕ್ಕೆ: ಹಾವೇರಿ ತಾಲೂಕಿನಲ್ಲಿ ಮೂರು ಭವನಗಳಿಗೆ ಧಕ್ಕೆಯಾಗಿದ್ದು 1.50ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ನಾಲ್ಕು ಭವನಗಳಿಗೆ ಹಾನಿಯಾಗಿದ್ದು 1.20ಲಕ್ಷರೂ.ಗಳಷ್ಟು ನಷ್ಟು ಹಾನಿಯಾಗಿದೆ. ಸವಣೂರು ತಾಲೂಕಿನಲ್ಲಿ ಒಂದು ಭವನಕ್ಕೆ ಧಕ್ಕೆಯಾಗಿ ಎರಡು ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಶಿಗ್ಗಾವಿ ತಾಲೂಕಿನಲ್ಲಿ ಎಂಟು ಭವನಗಳಿಗೆ ಹಾನಿಯಾಗಿದ್ದು 3.10ಲಕ್ಷ ರೂ. ನಷ್ಟವಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಎಂಟು ಭವನಗಳಿಗೆ ಧಕ್ಕೆಯಾಗಿ 6.20ಲಕ್ಷ ರೂ.ಗಳಷ್ಟು ಸಂಭವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 24 ಸಮುದಾಯ ಭವನಗಳಿಗೆ 14ಲಕ್ಷ ರೂ.ಗಳಷ್ಟು ನಷ್ಟವಾಗಿದ್ದು 14ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ.
ಪಿಡಬ್ಲ್ಯೂಕಟ್ಟಡ ಹಾನಿ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಅಂಗನವಾಡಿ, ಮಹಿಳಾ ಮಂಡಲ, ಸಮುದಾಯ ಭವನ, ಯುವ ಕೇಂದ್ರ ಸೇರಿದಂತೆ ಒಟ್ಟು 26 ಕಟ್ಟಡಗಳು ಹಾನಿಗೊಳಗಾಗಿವೆ. ಹಿರೇಕೆರೂರು ತಾಲೂಕಿನಲ್ಲಿ ಆರು, ಶಿಗ್ಗಾವಿ ತಾಲೂಕಿನಲ್ಲಿ ಐದು, ಹಾನಗಲ್ಲ ತಾಲೂಕಿನಲ್ಲಿ ಏಳು ಕಟ್ಟಡಗಳಿಗೆ ಸಂಬಂಧಿಸಿ 2.66 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ.
ನೆರೆ ಸೃಷ್ಟಿಸಿದ ಆವಾಂತರದಿಂದ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಇವೆಲ್ಲವುಗಳಿಗೆ ಶೀಘ್ರ ಪರಿಹಾರ ಬಿಡುಗಡೆಯಾಗಿ ದುರಸ್ತಿ ಕಾರ್ಯವಾಗಬೇಕಿದೆ.
ನೆರೆ-ಅತಿವೃಷ್ಟಿಯಿಂದ ಶಾಲೆ, ಅಂಗನವಾಡಿ ಸೇರಿದಂತೆ ಇತರ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಪಂ ವ್ಯಾಪ್ತಿಯ 952 ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿ 29.55ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಿದ್ದು, 15.42ಕೋಟಿ ಪರಿಹಾರ ನಿರೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದೇ ರೀತಿ ಲೋಕೋಪಯೋಗಿ ವ್ಯಾಪ್ತಿಯ 26 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದ್ದು, 2.66 ಕೋಟಿ ರೂ. ಹಾನಿಯಾಗಿದೆ. ಸಮಗ್ರ ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
ಭವನಗಳಿಗೆ 14 ಲಕ್ಷ ರೂ.ಗಳಷ್ಟು ನಷ್ಟ:
ನೆರೆ-ಅತಿವೃಷ್ಟಿಯಿಂದ ಶಾಲೆ, ಅಂಗನವಾಡಿ ಸೇರಿದಂತೆ ಇತರ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಪಂ ವ್ಯಾಪ್ತಿಯ 952 ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿ 29.55ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಿದ್ದು, 15.42ಕೋಟಿ ಪರಿಹಾರ ನಿರೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದೇ ರೀತಿ ಲೋಕೋಪಯೋಗಿ ವ್ಯಾಪ್ತಿಯ 26 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದ್ದು, 2.66 ಕೋಟಿ ರೂ. ಹಾನಿಯಾಗಿದೆ. ಸಮಗ್ರ ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಎನ್. ತಿಪ್ಪೇಸ್ವಾಮಿ, ಪ್ರಭಾರಿ ಅಪರ ಜಿಲ್ಲಾಧಿಕಾರಿ, ಹಾವೇರಿ
•ಎಚ್.ಕೆ. ನಟರಾಜ