Advertisement

ಕೋವಿಡ್: ರಾಜ್ಯದಲ್ಲಿಂದು 967 ಪಾಸಿಟಿವ್ ಪ್ರಕರಣ| 921 ಸೋಂಕಿತರು ಗುಣಮುಖ

06:31 PM Sep 10, 2021 | Team Udayavani |

ಬೆಂಗಳೂರು:  ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣ ಪತ್ತೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 967 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದೆ ಹಾಗೂ ಸೋಂಕಿನಿಂದ 10 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ವರದಿಗಳ ಪ್ರಕಾರ 921 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು 17028 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಪಾಸಿಟಿವಿಟಿ ದರ 0.57 % ಹಾಗೂ ಡೆತ್ ರೇಟ್ 1.03 % ಇದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-6, ಬೆಳಗಾವಿ-15, ಬೆಂಗಳೂರು ಗ್ರಾಮಾಂತರ-14, ಬೆಂಗಳೂರು ನಗರ-310, ಬೀದರ್ -0, ಚಾಮರಾಜನಗರ -6, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-37, ಚಿತ್ರದುರ್ಗ-10, ದಕ್ಷಿಣ ಕನ್ನಡ-141, ದಾವಣಗೆರೆ-3, ಧಾರವಾಡ-5, ಗದಗ-0, ಹಾಸನ-61, ಹಾವೇರಿ-0, ಕಲಬುರಗಿ-7, ಕೊಡಗು-74, ಕೋಲಾರ-2, ಕೊಪ್ಪಳ-1, ಮಂಡ್ಯ-14, ಮೈಸೂರು-55, ರಾಯಚೂರು-1, ರಾಮನಗರ-0, ಶಿವಮೊಗ್ಗ-32, ತುಮಕೂರು-41, ಉಡುಪಿ-96, ಉತ್ತರ ಕನ್ನಡ-32, ವಿಜಯಪುರ-3, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next