Advertisement

ಕಾನ್ಪುರ:ಅಮಾನ್ಯಗೊಂಡ 96 ಕೋಟಿ ರೂ ಕಪ್ಪು ಹಣ ಪತ್ತೆ!

12:39 PM Jan 17, 2018 | |

ಕಾನ್ಪುರ: ನೋಟು ನಿಷೇಧ ಗೊಂಡು ವರ್ಷದ ಬಳಿಕ ಉತ್ತರಪ್ರದೇಶದ ಔದ್ಯೋಗಿಕ ರಾಜಧಾನಿ ಎನಿಸಿಕೊಳ್ಳುವ ಕಾನ್ಪುರದಲ್ಲಿ ಬರೋಬ್ಬರಿ 96 ಕೋಟಿ ರೂ ಮೌಲ್ಯದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

ವ್ಯಾಪಾರಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುವ ವೇಳೆ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾಗಿದೆ. 

ಮೊದಲು ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಕಪ್ಪು ಹಣ ಪತ್ತೆಯಾಗಿದ್ದು, ಜಾಡು ಬೆನ್ನಟ್ಟಿ ಹೋದಾಗ ಇನ್ನೂ ಕೆಲ ವ್ಯಾಪಾರಿಗಳ ಬಳಿ ಅಪಾರ ಹಣ ಪತ್ತೆಯಾಗಿದೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಹೈದರಾಬಾದ್‌ ಮೂಲದವರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next