Advertisement

ಮುಂಬಯಿಯಲ್ಲಿ 9,500 ಕಟ್ಟಡಗಳ ಸೀಲ್‌ ಡೌನ್‌

07:15 PM Sep 23, 2020 | Suhan S |

ಮುಂಬಯಿ, ಸೆ. 22: ಮುಂಬಯಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಿರ್ಬಂಧಿತ ಕಟ್ಟಡಗಳ ಸಂಖ್ಯೆಯೂ ಹೆಚ್ಚಲಾರಂಭಿಸಿದೆ. ಪ್ರಸ್ತುತ ಮುಂಬಯಿಯಲ್ಲಿ 9,500ಕ್ಕಿಂತ ಅಧಿಕ ಕಟ್ಟಡಗಳನ್ನು ಸೀಲ್‌ಡೌನ್‌ಮಾಡಲಾಗಿವೆ ಎಂದು ಮನಪಾ ಮೂಲಗಳು ಹೇಳಿವೆ.

Advertisement

ಸೆ. 1ರ ವರೆಗೆ 6,293 ಕಟ್ಟಡಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಈ ಸೆ.14ರ ವೇಳೆಗೆ ಈ ಸಂಖ್ಯೆ 8,637ಕ್ಕೆ ತಲುಪಿದ್ದು, ಸೆ. 20ಕ್ಕೆ ಈ ಸಂಖ್ಯೆ 9,527ಕ್ಕೆ ಏರಿಕೆಯಾಗಿದೆ. ಕೋವಿಡ್ ಆರಂಭದಲ್ಲಿ ಓರ್ವ ಸೋಂಕಿತ ಕಂಡುಬಂದಲ್ಲಿ ಸಂಪೂರ್ಣ ಕಟ್ಟಡವನ್ನು ಸೀಲ್‌ ಡೌನ್‌ ಮಾಡಲಾಗುತ್ತಿರುವುದಕ್ಕೆ ವ್ಯಾಪಕ ವಿರೋಧದ ಬಂದ ಬಳಿಕ ಈ ನಿರ್ಬಂಧಗಳನ್ನು ಸಡಿಲಿಸಲಾಯಿತು.

ಅನಂತರ ಸೋಂಕಿತ ವಾಸಿಸುತ್ತಿದ್ದ ಮಹಡಿ ಅಥವಾ ಫ್ಲಾಟ್‌ ಅನ್ನು ಮಾತ್ರ ಸೀಲ್‌ಟೌನ್‌ ಮಾಡುವ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇತ್ತೀಚೆಗೆ ಮತ್ತೆ ಕಟ್ಟಡಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದ ನಗರದ ವ್ಯಾಪ್ತಿಯ ಕಟ್ಟಡಯೊಂದರಲ್ಲಿ ಹತ್ತಕ್ಕೂ ಹೆಚ್ಚು ನಿವಾಸಿಗರು ಕೊರೊನಾ ಸೋಂಕಿ ನಿಂದ ಪ್ರಭಾವಿತರಾಗಿದ್ದರೆ ಅಥವಾ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಮಹಡಿಗಳಲ್ಲಿ ಸೋಂಕಿತರು ಕಂಡು ಬಂದರೆ, ಸಂಪೂರ್ಣ ಕಟ್ಟಡವನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಿರುವ ಕಾರಣ ಸಂಪೂರ್ಣ ಸೀಲ್‌ ಡೌನ್‌ ಆಗುವ ಕಟ್ಟಡಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಆಗಸ್ಟ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರಮಾಣ ಕಡಿಮೆಯಾದಂತೆ, ನಿರ್ಬಂ ಧಿತ ಕಟ್ಟಡಗಳ ಸಂಖ್ಯೆಯೂ ಕಡಿಮೆಯಾಯಿತು. ಆದರೆ ಸೆಪ್ಟಂಬರ್‌ ಮೊದಲ ವಾರದಿಂದ ಈ ಸಂಖ್ಯೆ ಹೆಚ್ಚಲಾರಂಭಿಸಿದೆ. ಪ್ರಸ್ತುತ ಒಟ್ಟು ರೋಗಿಗಳಲ್ಲಿ ಶೇ. 80ರಷ್ಟು ಕೋವಿಡ್ ಸೋಂಕಿತರು ಕಟ್ಟಡ ನಿವಾಸಿಯಾಗಿದ್ದರಿಂದ ಈ ಕಟ್ಟಡಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next