Advertisement
ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ಯಾರೂ ಕೂಡ ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಐಸಿಯುಕಾಯ್ದಿರಿಸಿಕೊಳ್ಳುವುದು, ಆಕ್ಸಿಜನಿಟೇಡ್ ಬೆಡ್‌ಮೀಸಲಿಟ್ಟುಕೊಳ್ಳುವುದನ್ನು ಮಾಡಬಾರದು. ದಿನಕ್ಕೆ 1,000 ಪ್ರಕರಣ ಇದ್ದರೆ ಶೇ.10 ರಿಂದ 20 ಮಂದಿಗೆಮಾತ್ರ ಬೆಡ್ ಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ 3ಸಾವಿರ, ಸರ್ಕಾರಿ ಆಸ್ಪತ್ರೆಯಲ್ಲಿ 2 ಸಾವಿರ ಇದೆ.ಜಯದೇವ ಆಸ್ಪತ್ರೆಯೂ ಸೇರಿದರೆ ಒಟ್ಟು 7 ಸಾವಿರ ಬೆಡ್ ಇದೆ. ಆಕ್ಸಿಜನ್ ಹಾಸಿಗೆ ಮತ್ತು ಅನಗತ್ಯವಾಗಿ ಬೆಡ್‌ಗಳನ್ನು ಮೀಸಲಿಟ್ಟುಕೊಳ್ಳಲಾಗುತ್ತಿದೆ. ಆದರೆಆಕ್ಸಿಜಿನೇಟೆಡ್ ಹಾಸಿಗೆ ಕೊರತೆ ಇಲ್ಲ. ಆಕ್ಸಿಜಿನೇಟ್ ಬೆಡ್ 155 ಖಾಸಗಿ, ಕೆ.ಆರ್.ಆಸ್ಪತ್ರೆಯಲ್ಲಿ 150 ಆಕ್ಸಿಜನೇಟೆಡ್ ಬೆಡ್ ಇದೆ.
Related Articles
Advertisement
ರೆಮ್‌ಡಿಸಿವರ್ ಕೊರತೆ ಇಲ್ಲ: ಕೋವಿಡ್ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಪ್ರತಿದಿನ ಪ್ರಕರಣಗಳಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗೆ ಜನ ಹೆಚ್ಚು ಮಂದಿಬರುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮತ್ತುಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದು ಔಷಧಲಭ್ಯವಾಗುತ್ತಿಲ್ಲ, ಬೆಡ್ ಕೊರತೆ, ಆಕ್ಸಿಜನ್ ಕೊರತೆಎಂಬ ಭಯವಿದೆ. ಆದರೆ, ರೆಮ್‌ಡಿಸಿವರ್‌ಗೆ ಸರ್ಕಾರಿಮತ್ತು ತಾಲೂಕು ಆಸ್ಪತ್ರೆಯಲ್ಲಿ ಕೊರತೆ ಇಲ್ಲ. ಜಿಲ್ಲೆಯಲ್ಲಿ 140 ಖಾಸಗಿ ಆಸ್ಪತ್ರೆಗಳಿದ್ದು, ಈ ಪೈಕಿ 35ಆಸ್ಪತ್ರೆ ಮಾತ್ರ ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲಿನೋಂದಾಯಿಸಿಕೊಂಡಿವೆ. ಮೇ 1 ರಿಂದ ಈ ಕೊರತೆಸುಧಾರಣೆ ಆಗಲಿದೆ. ಮುಂಚೆಯೇ ಹೆಸರುನೋಂದಾಯಿಸಿಕೊಂಡು ಬಂದರೆ ರೆಮ್‌ಡಿಸಿವರ್ ಕೊರತೆ ಇರುವುದಿಲ್ಲ ಎಂದು ಅವರು ವಿವರಿಸಿದರು.
ಜಿಲ್ಲೆಗೆ 12 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು :
ಹಾಸಿಗೆ ಖಾಲಿ ಇದೆ ಎಂದು ಅವುಗಳನ್ನು ಮೀಸಲಿಟ್ಟುಕೊಳ್ಳುವುದು ಸರಿಯಲ್ಲ. ಅಗತ್ಯ ಇರುವವರಿಗೆ ಆಕ್ಸಿಜಿನೇಟೆಡ್, ವೆಂಟಿಲೇಟರ್ ಹಾಸಿಗೆ ಸಿಗಬೇಕು. ನಮ್ಮ ಜಿಲ್ಲೆಗೆ 12 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆ. ಮುಂದೆ 20 ರಿಂದ 25 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ. ಮನೆಯಲ್ಲಿ ಈ ಹಿಂದೆ ಸಣ್ಣವರು, ವೃದ್ಧರಿಗೆ ಬೇಗ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಮನೆಯಲ್ಲಿಯೇಪ್ರಾಣಾಯಾಮ ಮಾಡಬೇಕು. ಒಳ್ಳೆಯ ಆಹಾರ ಸೇವಿಸಬೇಕು. ಪ್ರತಿದಿನ ಸುಮಾರು 7 ಸಾವಿರ ಮಂದಿ ಪರೀಕ್ಷೆ ಮಾಡುತ್ತಿದ್ದೆವು. ಎಂಎಂಸಿಆರ್‌ಐ ಮತ್ತು ಸಿಎಫ್ಟಿಆರ್‌ಐಗೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿಯೂ ಇಬ್ಬರಿಗೆ ಪಾಸಿಟಿವ್ ಬಂದ ಪರಿಣಾಮ ಫಲಿತಾಂಶ ತಡವಾಗಿದೆ. ಪಾಸಿಟಿವ್ ವರದಿಗಳನ್ನು ಮಾತ್ರ ಬೇಗ ನೀಡಲಾಗಿದೆ. ಆದರೆ, ನೆಗೆಟಿವ್ ವರದಿ ಬಂದಿಲ್ಲ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ಸೋಂಕು ತಗುಲಿದರೆ ಹೆಲ್ಪ್ಲೈನ್ ಸಂಪರ್ಕಿಸಿ :
ಈಗ ವಾರ್ ರೂಂ. ತೆಗೆದಿದ್ದು, ಅಲ್ಲಿನ ದೂ. 0821- 2957711, 2957811 ಸಂಪರ್ಕಿಸಬಹುದು. ಯಾರಿಗೆ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೋ ಅವರಿಗೆ ಇಲ್ಲಿಂದ ಕರೆ ಮಾಡಲಾಗುವುದು. ಇದರ ಜತೆಗೆಇಂದಿನಿಂದ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕೇಂದ್ರ ತೆರೆಯಲಾಗುತ್ತಿದ್ದು,ಆಸಕ್ತರು ಇದರ ದೂ. 0821- 2424111ಸಂಪರ್ಕಿಸಬಹುದು. ತಾಲೂಕು ಮಟ್ಟದಲ್ಲಿ ಹೆಲ್ಪ್ಲೈನ್ ಮತ್ತು ಮತ್ತು ವಿಧಾನಸಭಾಕ್ಷೇತ್ರವಾರು ಹೆಲ್ಪ್ಲೈನ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.