ಹೂಡಿಕೆಗೆ ಅವಕಾಶ ಕಲ್ಪಿಸುವ ಜತೆಗೆ 93,357 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ ಎಂದು ಸಚಿವ ಆರ್. ವಿ.ದೇಶಪಾಂಡೆ ಹೇಳಿದರು.
Advertisement
ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಶುಕ್ರವಾರ ನಡೆದ ರಾಜ್ಯ ಉನ್ನತ ಮಟ್ಟದಒಪ್ಪಿಗೆ ನೀಡಿಕೆ ಸಮಿತಿ ಐದು ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ. ಅದರಂತೆ 6,706.15 ಕೋಟಿ ರೂ.
ಹೂಡಿಕೆಯಾಗಲಿದ್ದು, 59,200 ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು. ಈ ಹಿಂದೆ ಅಂದರೆ ಜ.30, ಫೆ.15 ಹಾಗೂ
ಫೆ.27ರಂದು ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ 5591.40 ಕೋಟಿ ರೂ. ಬಂಡವಾಳ ಹೂಡಿಕೆ ಯೋಜನೆಗಳ ಮೂಲಕ 34,057 ಉದ್ಯೋಗ ಸೃಷ್ಟಿ ನಿರೀಕ್ಷೆಯಿದೆ ಎಂದು ತಿಳಿಸಿದರು.
12.16 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ ಹೇಳಿದರು. ಫೆ.23ರಂದು ಒಪ್ಪಿಗೆ ನೀಡಿರುವ ಯೋಜನೆಗಳು
ಸ್ಮಾರ್ಟ್‌ಫೋನ್ಸ್, ಐಒಟಿ ಉತ್ಪನ್ನ, ಬಯೋ ಟೆಕ್ ಉಪಕರಣ: ವೆಸ್ಟ್ರೋನ್ ಇನ್ ಫೋಕಾಂ ಮ್ಯಾನುಫ್ಯಾಕ್ಷರಿಂಗ್ ಇಂಡಿಯಾ
ಪ್ರೈ. ಲಿ. ಕೋಲಾರದ ಅಕ್ಕಚಾತನಹಳ್ಳಿ ಗ್ರಾಮದಲ್ಲಿ 43 ಎಕರೆ ಭೂಮಿ. 682 ಕೋಟಿ ರೂ. ಹೂಡಿಕೆ. 6000 ಉದ್ಯೋಗ.
Related Articles
ನಗರದ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 46 ಎಕರೆ. 786 ಕೋಟಿ ರೂ. ಹೂಡಿಕೆ. 1800 ಉದ್ಯೋಗ.
Advertisement
5000 ಟಿಸಿಡಿ ಸಕ್ಕರೆ ಘಟಕ, 30 ಮೆ.ವ್ಯಾ. ಕೋ-ಜನ್, 60 ಕೆಎಲ್‌ಪಿಡಿ ಡಿಸ್ಟಿಲರಿ: ಅಂಜಲಿತಾಯ್ ಕೇನ್ಸ್ ಪ್ರೈ.ಲಿ. ಖಾನಾ ಪುರದ ಹಾಲಗದಲ್ಲಿ 31.12 ಎಕರೆ. 532 ಕೋಟಿ ರೂ. ಹೂಡಿಕೆ. 800 ಉದ್ಯೋಗ. ಐಟಿ/ಐಟಿಇಎಸ್ ಕಚೇರಿ ಸ್ಥಳ, ಹೋಟೆಲ್, ಸರ್ವಿಸ್ ಅಪಾರ್ಟ್‌ಮೆಂಟ್, ಸಾಮಾನ್ಯ ಸೌಲಭ್ಯ: ಬಿಪಿಕೆ ಡೆವಲಪ್‌ಮೇಟ್ಸ್ ಎಲ್
ಎಲ್‌ಪಿ. ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡನೆಕ್ಕುಂದಿ ಗ್ರಾಮದಲ್ಲಿ 90.15 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ
ಒಪ್ಪಿಗೆ ಆಧಾರಿತ ಏಕ ಸಂಕೀರ್ಣ ಘಟಕ ಅಡಿ ಸ್ವಾಧೀನ- ಹಂಚಿಕೆ. 3,495 ಕೋಟಿ ರೂ. ಹೂಡಿಕೆ. 50000 ಉದ್ಯೋಗ. ವಿದ್ಯುತ್‌ಚಾಲಿತ ವಾಹನಗಳಿಗೆ ಲಿಥಿಯಂ ಬ್ಯಾಟರಿ ಮತ್ತು ಸಂಗ್ರಹಣೆ: ಅಂಪೀರಿಯಾ ಲಿಥಿಯಂ ಬ್ಯಾಟರಿ ಮ್ಯಾನುಫ್ಯಾಕ್ಚರಿಂಗ್
ಪ್ರೈ. ಲಿ. ಕೋಲಾರದ ಗೌರಿಬಿದನೂರು ಕೈಗಾರಿಕಾ ಪ್ರದೇಶದಲ್ಲಿ 76 ಎಕರೆ ಕೆಐಎಡಿಬಿ ಭೂಮಿ. 1,210 ಕೋಟಿ ರೂ.
ಹೂಡಿಕೆ. 600 ಉದ್ಯೋಗ.