Advertisement

Udan: ಶೇ.93 ಉಡಾನ್‌ ಮಾರ್ಗ ನಿಷ್ಕ್ರಿಯ: ಖರ್ಗೆ ಆರೋಪ

10:05 PM Aug 19, 2023 | Team Udayavani |

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಈಗ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಉಡಾನ್‌ ಯೋಜನೆಯ ವಿರುದ್ಧ ಹರಿಹಾಯ್ದಿದ್ದಾರೆ. ಈ ಯೋಜನೆ ಶೇ.93ರಷ್ಟು ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ. ಹೀಗೆಂದು ನಾನು ಹೇಳುತ್ತಿಲ್ಲ ಭಾರತದ ಮಹಾ ಲೆಕ್ಕ ಪರಿಶೋಧಕರ (ಸಿಎಜಿ) ವರದಿಯೇ ಹೇಳುತ್ತಿದೆ ಎಂದಿದ್ದಾರೆ.

Advertisement

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಚಪ್ಪಲಿ ಹಾಕಿರುವ ವ್ಯಕ್ತಿ ಕೂಡ ವಾಯುಮಾರ್ಗದಲ್ಲಿ ಓಡಾಡುವಂತಾಗುತ್ತದೆ ಎಂದು ಮೋದಿ ಸರ್ಕಾರ ಭರವಸೆ ನೀಡಿತ್ತು. ಹಿಂದಿನೆಲ್ಲ ಭರವಸೆಗಳಂತೆ ಇದೂ ವಾಯುಮಾರ್ಗವನ್ನೇ ಹಿಡಿದಿದೆ ಎಂದು ವ್ಯಂಗ್ಯವಾಡಿದ್ದಾರೆ. ಹಿಂದೆ ಮೋದಿ ಉಡಾನ್‌ ಯೋಜನೆಯಡಿ ಶಿಮ್ಲಾ-ದೆಹಲಿ ಮಾರ್ಗವನ್ನು ಉದ್ಘಾಟಿಸುವಾಗ, ಹವಾಯಿ ಚಪ್ಪಲಿ ಧರಿಸುವ ವ್ಯಕ್ತಿ ಕೂಡ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕೆಂದು ನಾನು ಕನಸು ಕಂಡಿದ್ದೆ. ಅದೀಗ ನನಸಾಗುತ್ತಿದೆ ಎಂದಿದ್ದರು. ಅದನ್ನೇ ಖರ್ಗೆ ವ್ಯಂಗ್ಯವಾಡಿದ್ದಾರೆ. ಹಾಗೆಯೇ ವಾಯುಮಾರ್ಗವನ್ನು ಪಾರದರ್ಶಕವಾಗಿ, ಸ್ವತಂತ್ರ ವ್ಯವಸ್ಥೆಯ ಮೂಲಕ ಪರಿಶೀಲನೆಯನ್ನೂ ಮಾಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next