Advertisement

ದೇಶೀಯವಾಗಿ 928 ರಕ್ಷಣಾ ಬಿಡಿಭಾಗ ಉತ್ಪಾದನೆ

10:38 PM May 14, 2023 | Team Udayavani |

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿನ ವಿದೇಶಿ ಅವಲಂಬನೆಯನ್ನು ಮೊಟಕುಗೊಳಿಸಲು ದೇಶೀಯವಾಗಿ ಉತ್ಪಾದಿಸಲ್ಪಟ್ಟಿರುವ ರಕ್ಷಣಾ ಸಾಮಗ್ರಿ ಖರೀದಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ 928 ಬಿಡಿಭಾಗಗಳು ಹಾಗೂ ಉಪವ್ಯವಸ್ಥೆಗಳ ಖರೀದಿಯ 4ನೇ ಪಟ್ಟಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಇದು ಆತ್ಮನಿರ್ಭರ ಭಾರತದ ನಿಟ್ಟಿನಲ್ಲಿ ಮತ್ತೂಂದು ದೃಢವಾದ ಹೆಜ್ಜೆ.

Advertisement

ಮಿಲಿಟರಿಯ ವಿವಿಧ ಕಡೆ ಬಳಕೆಯಾಗುವಂಥ ಶಸ್ತ್ರಾಸ್ತ್ರಗಳ ಬಿಡಿಭಾಗಗಳು, ಉಪಕರಣಗಳ ಉಪವ್ಯವಸ್ಥೆಗಳನ್ನು ಪಟ್ಟಿಮಾಡಿ ವಿದೇಶಗಳಿಂದ ಅಂಥವುಗಳ ಆಮದನ್ನು ನಿಷೇಧಿಸಲು ಯೋಜಿಸಲಾಗಿದೆ. ಆ ರೀತಿ ನಿಷೇಧಗೊಳ್ಳಲಿರುವ 928 ವ್ಯವಸ್ಥೆಗಳನ್ನು ಇನ್ನಮುಂದೆ ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗುತ್ತದೆ ಅಲ್ಲದೇ, ದೇಶಿಯ ಸಂಸ್ಥೆಗಳಿಂದಲೇ ಅವುಗಳನ್ನು ರಕ್ಷಣಾ ಪಡೆಗಳು ಖರೀದಿಸಲಿವೆ. ಈಗಾಗಲೇ ಇಂಥ ಮೂರು ಪಟ್ಟಿಗಳನ್ನು ತಯಾರಿಸಿ ಅನುಮೋದನೆ ಪಡೆಯಲಾಗಿತ್ತು. ಇದೀಗ ನಾಲ್ಕನೇ ಪಟ್ಟಿಗೂ ಭಾನುವಾರ ಸಚಿವಾಲಯ ಅಸ್ತು ಎಂದಿದೆ. ರಕ್ಷಣಾ ಆತ್ಮನಿರ್ಭರತೆಯ ಸಲುವಾಗಿ 2023ರ ಡಿಸೆಂಬರ್‌ನಿಂದ 2028ರ ಡಿಸೆಂಬರ್‌ವರೆಗೆ ನಿರ್ದಿಷ್ಟ ರಕ್ಷಣಾ ವಸ್ತುಗಳ ಆಮದು ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next