Advertisement
ಇದೇ ಸಂದರ್ಭದಲ್ಲಿ ಒಟ್ಟು 47 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
Related Articles
Advertisement
ದ.ಕ. ಜಿಲ್ಲೆಯಲ್ಲಿ ಇಲ್ಲಿವರೆಗೆ 2452 ಮಂದಿಗೆ ಕೋವಿಡ್ 19 ಸೋಂಕು ಧೃಡಪಟ್ಟಿದ್ದು 985 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 1414 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು: 2 ಪಾಸಿಟಿವ್ತಾಲೂಕಿನಲ್ಲಿ ಮಂಗಳವಾರ 2 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ 70ರ ವೃದ್ಧ ಮತ್ತು ಪುತ್ತೂರು ನಗರಸಭಾ ವ್ಯಾಪ್ತಿಯ ಮೊಟ್ಟೆತ್ತಡ್ಕ ನಿವಾಸಿ 62 ವರ್ಷ ವಯಸ್ಸಿನ ವ್ಯಕ್ತಿ ಬಾಧಿತರು. ಇಬ್ಬರು ಕೂಡ ಜ್ವರದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢವಾಗಿದೆ. ಬಂಟ್ವಾಳ: 6 ಮಂದಿಗೆ ಪಾಸಿಟಿವ್
ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ 6 ಮಂದಿಗೆ ಕೋವಿಡ್ 19 ಸೋಂಕು ದೃಢ ಪಟ್ಟಿದ್ದು, ಬಿ.ಮೂಡದ 66 ವರ್ಷದ ಪುರುಷ, ತೆಂಕಕಜೆಕಾರಿನ 32 ವರ್ಷದ ಮಹಿಳೆ, ಬಂಟ್ವಾಳ ಕಸ್ಬಾದ 62 ವರ್ಷದ ಮಹಿಳೆ, ಸಿದ್ಧಕಟ್ಟೆಯ 29 ವರ್ಷದ ಯುವಕ, ನರಿಕೊಂಬಿನ 54 ವರ್ಷದ ಪುರುಷ ಹಾಗೂ ಕೊಡ್ಮಾಣ್‌ನ 70 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಉಳ್ಳಾಲ: 14 ಮಂದಿಗೆ ಸೋಂಕು
ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂಟು ವರ್ಷದ ಬಾಲಕ ಸೇರಿ ಸುಮಾರು 14 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ 10 ಮಂದಿ ಉಳ್ಳಾಲ ನಗರಸಭಾ ವ್ಯಾಪ್ತಿಯವರಾಗಿದ್ದು, ಉಳಿದವರು ಮುನ್ನೂರು, ಕುಂಪಲ, ಕಿನ್ಯ ನಿವಾಸಿಗಳಾಗಿದ್ದಾರೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಅರೆಕೆರೆಯ 20, 16, 53, 39, 18 ವರ್ಷದ ವ್ಯಕ್ತಿ ಮತ್ತು 23 ಮತ್ತು 35 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದ್ದರೆ ಉಳ್ಳಾಲ ಕೋಟೆಪುರದ 14ರ ಬಾಲಕ, ಮಾಸ್ತಿಕಟ್ಟೆ ಅಝಾದ್ ನಗರದ 8ರ ಬಾಲಕ, 65ರ ಮಹಿಳೆ. ಮುನ್ನೂರು ಗ್ರಾಮದ 24ರ ಯುವತಿ ಪಂಡಿತ್‌ಹೌಸ್‌ನ 46ರ ಮಹಿಳೆ ಮತ್ತು ಕಿನ್ಯ ಗ್ರಾಮದ 22ರ ಯುವತಿ ಮತ್ತು ಸೋಮೇಶ್ವರ ಕುಂಪಲದ 20ರ ಯುವಕನಿಗೆ ಸೊಂಕು ತಗುಲಿದೆ. ಕಾಪು: ಕುಟುಂಬದ 7 ಮಂದಿಗೆ ಪಾಸಿಟಿವ್
ಕಾಪು ಪುರಸಭಾ ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ಕುಟುಂಬದ ಏಳು ಮಂದಿ, ಪೊಲೀಸ್ ಕಾನ್‌ಸ್ಟೆಬಲ್ ಸಹಿತ 9 ಮಂದಿಗೆ ಕೋವಿಡ್ 19 ಪಾಸಿಟಿವ್ ಧೃಢಪಟ್ಟಿದೆ. ಕಾಪು ಠಾಣೆಗೆ ಸಮೀಪದ ಹೊಟೇಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದ ಕಾನ್‌ಸ್ಟೆಬಲ್ ಇದೀಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಂಜೆ ನಿವಾಸಿ, ಮಣಿಪಾಲ ಖಾಸಗಿ ಆಸ್ಪತ್ರೆಯ ಸಿಬಂದಿಯಲ್ಲೂ ಪಾಸಿಟಿವ್ ಕಂಡು ಬಂದಿದೆ. ವಧುವಿನ ಮನೆಯವರಿಗೂ ಪಾಸಿಟಿವ್
ಮಲ್ಲಾರು ಕೊಂಬಗುಡ್ಡೆಯ ಒಂದೇ ಮನೆಯ ಏಳು ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಹೊಸನಗರಕ್ಕೆ ಮದುವೆ ಮಾಡಿಕೊಡಲಾಗಿದ್ದ ವಧುವಿಗೆ ಜು. 6ರಂದು ದೃಢಪಟ್ಟಿದ್ದು, ಆ ಬಳಿಕ ಆಕೆಯ ಮೆಹಂದಿ ಕಾರ್ಯಕ್ರಮ ನಡೆದ ಮನೆಯವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು ಎಲ್ಲರ ವರದಿ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.