ದಾವಣಗೆರೆ: ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಮಂಗಳವಾರ 89ನೇ ವರ್ಷ ಪೂರೈಸಿ 90ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಗಣ್ಯರು, ಆಪ್ತರು, ಕುಟುಂಬ ಸದಸ್ಯರು ಜನ್ಮದಿನದ ಶುಭಾಶಯ ಕೋರಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ “ಶಿವ ಪಾರ್ವತಿ ನಿವಾಸ’ಕ್ಕೆ ಆಗಮಿಸಿದಅನೇಕರು, ಶಾಮನೂರು ಶಿವಶಂಕರಪ್ಪನವರಿಗೆ ಶುಭ ಕೋರಿದರು. ಮಕ್ಕಳಾದ ಡಾ| ಮಂಜುಳಾ, ಡಾ| ಶೈಲಜಾ ಭಟ್ಟಾಚಾರ್ಯ, ಸುಧಾ, ಮೀನಾ ಡಾ| ಶರಣ್ ಪಾಟೀಲ್, ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಡಾ| ಎಸ್.ಬಿ. ಮುರುಗೇಶ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರುಗಳು, ಸಂಬಂಧಿಕರು ಶುಭಾಶಯ ತಿಳಿಸಿದರು.
ಸಂಬಂಧಿಕರೂ ಆದ ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ದಂಪತಿ ಸಮೇತ ಆಗಮಿಸಿ ಶುಭ ಕೋರಿದರು. ಶಾಮನೂರು ಶಿವಶಂಕರಪ್ಪನವರ ಸಂಬಂಧಿಕರಾದ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ| ಶಿವರಾಜ್ ಪಾಟೀಲ್ ಸಹ ಶುಭ ಹಾರೈಸಿದರು. ಮಾಜಿ ಸಚಿವರಾದ ಎಚ್. ಆಂಜನೇಯ, ಪಿ.ಟಿ. ಪರಮೇಶ್ವರ ನಾಯ್ಕ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ಜಿಪಂ ಸದಸ್ಯರಾದ ಕೆ.ಎಸ್. ಬಸವಂತಪ್ಪ, ಕೆ.ಎಚ್. ಓಬಳಪ್ಪ, ಮಾಜಿ ಅಧ್ಯಕ್ಷ ಡಾ| ವೈ. ರಾಮಪ್ಪ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿಗುಡಾಳ್ ಮಂಜುನಾಥ್, ಕೆ.ಚಮನ್ ಸಾಬ್, ಮೊಹ್ಮದ್ ಕಬೀರ್ ಅಲಿ,ಜಾಕೀರ್ ಅಲಿ, ಸುಧಾ ಇಟ್ಟಿಗುಡಿ ಮಂಜುನಾಥ್, ಸಯೀದ್ ಚಾರ್ಲಿ, ಆಶಾ, ಜೆ.ಎನ್. ಶ್ರೀನಿವಾಸ್, ಎಸ್. ಶ್ವೇತ, ಸವಿತಾ ಗಣೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು.
ಜನ್ಮದಿನದ ಅಂಗವಾಗಿ ಆಹಾರದ ಕಿಟ್ ವಿತರಣೆ, ರಕ್ತದಾನ ಶಿಬಿರ, ಸಸಿ ನೆಡುವುದು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.