Advertisement

ಭಾರತದ ರೀನಾ 75 ವರ್ಷಗಳ ನಂತರ ಪಾಕ್‌ನ ಪೂರ್ವಜರ ಮನೆಯತ್ತ ಪಯಣ!

11:06 AM Jul 18, 2022 | Team Udayavani |

ನವದೆಹಲಿ: ಭಾರತದ ರೀನಾ ಚಿಬ್ಬರ್‌ ವರ್ಮಾ(92) ಬರೋಬ್ಬರಿ 75 ವರ್ಷಗಳ ನಂತರ ಶನಿವಾರ ಪಾಕಿಸ್ತಾನದಲ್ಲಿರುವ ತಮ್ಮ ಪೂರ್ವಜರ ಮನೆಗೆ ತೆರಳಿದ್ದಾರೆ.

Advertisement

ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನ್‌, ರೀನಾ ಅವರಿಗೆ ಮಾನವೀಯತೆ ನೆಲೆಯಲ್ಲಿ 3 ತಿಂಗಳ ವೀಸಾ ಕೊಟ್ಟಿದೆ.

ರೀನಾ ಪಾಕ್‌ನ ರಾವಲ್ಪಿಂಡಿ ಮೂಲದವರು. ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ಅವರು, 1947ರಲ್ಲಿ ಭಾರತ-ಪಾಕ್‌ ವಿಭಜನೆಯಾದಾಗ ಭಾರತಕ್ಕೆ ಬಂದಿದ್ದರು. ಆದರೆ ಪಾಕಿಸ್ತಾನದಲ್ಲಿರುವ ಪೂರ್ವಜರ ಮನೆ ನೋಡಬೇಕೆಂದು 1965ರಲ್ಲೇ ವೀಸಾಕ್ಕೆ ಅರ್ಜಿ ಹಾಕಿದ್ದರು. ಆಗ ಎರಡೂ ದೇಶಗಳ ನಡುವೆ ಯುದ್ಧ ಸನ್ನಿವೇಶವಿದ್ದ ಹಿನ್ನೆಲೆ ಅರ್ಜಿ ವಜಾ ಮಾಡಲಾಗಿತ್ತು.

ಇತ್ತೀಚೆಗೆ ಮತ್ತೆ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಆಗಲೂ ಅದು ತಿರಸ್ಕೃತವಾಗಿತ್ತು. ಈ ವಿಚಾರವಾಗಿ ಅವರು ಪಾಕ್‌ನ ವಿದೇಶಾಂಗ ಸಚಿವಾಲಯ ಸಹಾಯಕ ಸಚಿವರಾಗಿರುವ ಹೀನಾ ರಬ್ಟಾನಿ ಖಾರ್‌ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದು, ಅವರು ರೀನಾಗೆ ವೀಸಾ ವ್ಯವಸ್ಥೆ ಮಾಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next