ಲಂಡನ್: ಒಂಬತ್ತರ ಹರೆಯದ ಈ ಪೋರನಿಗೆ ಚೆಸ್ ಆಗಲಿ, ಸಂಗೀತ ಪರಿಕರಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ವೀಕ್ಷಿಸುವ ಲ್ಯೂರೆಂಟ್ ಸಿಮೊನ್ಸ್ ಗೆ ಶಿಕ್ಷಣದ ಬಗ್ಗೆ ಅಪಾರ ಪ್ರೀತಿ. ಈ ನಿಟ್ಟಿನಲ್ಲಿ 9ನೇ ವರ್ಷಕ್ಕೆ ಎಲೆಕ್ಟ್ರಿಕಲ್ ಇಂಜಿಯರಿಂಗ್ ಪದವಿ ಪಡೆದ ಜಗತ್ತಿನ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಬೆಲ್ಜಿಯನ್ ನಿವಾಸಿಯಾಗಿರುವ ಲ್ಯೂರೆಂಟ್ ಎಂಬ ಜೀನಿಯಸ್ ಕಳೆದ ಡಿಸೆಂಬರ್ ನಲ್ಲಿ ಎಯಿಂಡ್ ಓವೆನ್ ಯೂನಿರ್ವಸಿಟಿ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವುದಾಗಿ ವರದಿ ತಿಳಿಸಿದೆ.
ಲ್ಯೂರೆಂಟ್ ತನ್ನ 8ನೇ ವಯಸ್ಸಿನಲ್ಲಿಯೇ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದ್ದ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. ಲ್ಯೂರೆಂಟ್ ಪದವಿ ಶಿಕ್ಷಣಕ್ಕೆ ಸೇರ್ಪಡೆಗೊಂಡ ಅತೀ ಕಿರಿಯ ಯೂನಿರ್ವಸಿಟಿ ವಿದ್ಯಾರ್ಥಿಯಾಗಿದ್ದ.
9ವರ್ಷದ ಲ್ಯೂರೆಂಟ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಪಡೆಯಲು ದಾಖಲಾತಿ ಮಾಡಿಕೊಂಡಿಸಿದ್ದ, ಅಲ್ಲದೇ ಮೆಡಿಸಿನ್ ನಲ್ಲಿಯೂ ಪದವಿ ಪಡೆಯುವ ಇಚ್ಛೆ ಹೊಂದಿದ್ದ ಎಂದು ಲ್ಯೂರೆಂಟ್ ತಂದೆ ಅಲೆಕ್ಸಾಂಡರ್ ಲ್ಯೂರೆಂಟ್ ಸಿಎನ್ ಎನ್ ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.
ವಿಶ್ವಾದ್ಯಂತ ಇರುವ ಪ್ರತಿಷ್ಠಿತ ಯೂನಿರ್ವಸಿಟಿಗಳಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ಲ್ಯೂರೆಂಟ್ ನದ್ದಾಗಿದೆ. ಆದರೆ ಆತ ಶಿಕ್ಷಣದ ಬಗ್ಗೆ ತುಂಬಾ ಗಂಭೀರವಾಗಿರುವುದು ನಮಗೆ ಬೇಕಾಗಿಲ್ಲ. ಆತನಿಗೆ ಏನು ಬೇಕೋ ಅದನ್ನು ಕಲಿಯಲಿ. ನಮಗೆ ಆತನ ಬಾಲ್ಯದ ಬದುಕು ಹಾಗೂ ಚುರುಕುತನವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.