Advertisement

ಆಂಧ್ರಪ್ರದೇಶ : ಬಾಲಕನನ್ನು ಕಚ್ಚಿ ಸಾಯಿಸಿದ ಬೀದಿ ನಾಯಿಗಳು

11:01 AM Feb 28, 2018 | Team Udayavani |

ಹೈದರಾಬಾದ್‌ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ  ಆಂಧ್ರಪ್ರದೇಶದಲ್ಲಿ  9 ವರ್ಷ ಪ್ರಾಯದ ಬಾಲಕನನ್ನು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ. 

Advertisement

ನಾಯಿಗಳ ದಾಳಿಗೆ ಗುರಿಯಾದ ಬಾಲಕ ಆರ್‌ ಜಸ್ವಂತ್‌ ಎಂಬಾತನನ್ನು ಒಡನೆಯೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಅಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟ. ಬಾಲಕನು ವಿಶಾಖಪಟ್ಟಣದಿಂದ ಸುಮಾರು 150 ಕಿ.ಮೀ. ಉತ್ತರಕ್ಕಿರುವ ಬಲಿಜಿಪೇಟ ಸಮೀಪದ ಅಮ್ಮಪಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. 

ಕೇರಳ, ದಿಲ್ಲಿಯಂತೆ ಆಂಧ್ರಪ್ರದೇಶದಲ್ಲೂ ಬೀದಿ ನಾಯಿಗಳ ಹಾವಳಿ ತೀವ್ರವಿದೆ. ಕೇರಳವೊಂದರಲ್ಲೇ ಈ ವರ್ಷ 53,000 ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ ಕಚ್ಚಿವೆ. ಬೀದಿ ನಾಯಿಗಳ ಹಾವಳಿ ತೀವ್ರವಾದಾಗ ಸ್ಥಳೀಯಾಡಳಿತೆಗಳು ಶ್ವಾನ ಸಂಹಾರಕ್ಕೆ ಮುಂದಾಗುತ್ತವೆ. ಆಗ ಅದರ ವಿರುದ್ಧ ಧ್ವನಿ ಎತ್ತುವ ಪ್ರಾಣಿ ದಯಾ ಸಂಘದವರು, ನಾಯಿಗಳನ್ನು ಕೊಲ್ಲುವ ಬದಲು ಅವುಗಳ ಸಂತಾನ ಹರಣ ಅಭಿಯಾನ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next