Advertisement
ಮುಂದಿನ 5 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದ ಸಮಗ್ರ ಏಳಿಗೆಗೆ ಬಜೆಟ್ ಘೋಷಣೆಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ 161 ಕೋಟಿ ರೂ. ಒದಗಿಸಲಾಗಿದೆ. ಅದೇ ರೀತಿ, ಜಾಗತಿಕ ಮಟ್ಟದ ಸಂಸ್ಥೆಗಳಿಗಾಗಿ 1800 ಕೋಟಿ ರೂ. ಮೀಸಲಿಡಲಾಗಿದೆ. ಯುಜಿಸಿಗೆ ಕೇವಲ 2,500 ಕೋಟಿ ರೂ
ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ)ಗೆ ಕಡಿಮೆ ಹಣವನ್ನು ಮೀಸಲಿಡಲಾಗಿದೆ. ಕಳೆದ ವರ್ಷ 6,409 ಕೋಟಿ ರೂ. ನೀಡಲಾಗಿತ್ತು. ಈ ವರ್ಷ ಈ ಅನುದಾನದಲ್ಲಿ ಶೇ.60.99ರಷ್ಟು ಖೋತಾ ಆಗಿದೆ. ಅಂದರೆ, ಕೇವಲ 2,500 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ಇದೇ ವೇಳೆ, ಕೇಂದ್ರ ವಿಶ್ವವಿದ್ಯಾಲಯಗಳಿಗೆ ಅನುದಾನ ಹೆಚ್ಚಿಸಲಾಗಿದೆ. 12 ಸಾವಿರ ಕೋಟಿ ರೂ.ನಿಂದ 15,427 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
Related Articles
ಅನುದಾನದ ಬರ!
ಸತತ ಎರಡನೇ ವರ್ಷವೂ ದೇಶದ ಐಐಎಂಗಳು ಅನುದಾನ ಕೊರತೆಯನ್ನು ಎದುರಿಸುತ್ತಿವೆ. ಈ ಸಂಸ್ಥೆಗಳಿದ್ದ 608 ಕೋಟಿ ರೂ. ಮೀಸಲು ಹಣವನ್ನು ಕಳೆದ ವರ್ಷ 300 ಕೋಟಿ ರೂ.ಗೆ ಇಳಿಸಲಾಗಿತ್ತು. ಈ ಬಜೆಟ್‌ನಲ್ಲಿ ಆ ಮೊತ್ತವನ್ನು 212 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ! ಅದೇ ರೀತಿ, ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಗಳು ಅನುದಾನದಲ್ಲಿ ಭಾರೀ ಕಡಿಮೆ ಮಾಡಲಾಗಿದೆ. ಈ ವರ್ಷ ಕೇವಲ 10,324 ಕೋಟಿ ರೂ. ಮೀಸಲಿಡಲಾಗಿದೆ.
Advertisement
ಯುಪಿಎಸ್ ಪರೀಕ್ಷೆಗೆ 200 ಕೋಟಿ ರೂ.ಬಜೆಟ್‌ನಲ್ಲಿ ಕೇಂದ್ರ ಲೋಕ ಸೇವಾ ಆಯೋಗಕ್ಕೆ 425.71 ಕೋಟಿ ರೂ ಬಿಡುಗಡೆಯಾಗಿದೆ. ಇದರಲ್ಲಿ ಯುಪಿಎಸ್‌ಸಿ ಪರೀಕ್ಷೆ ಹಾಗೂ ನೇಮಕಾತಿಗೆ 200 ಕೋಟಿ ರೂ, ವೇತನ, ಭತ್ಯೆ ಹಾಗೂ ಇತರೇ ಉದ್ದೇಶಕ್ಕಾಗಿ 208.99 ಕೋಟಿ ರೂ ಬಳಕೆಯಾಗಲಿದೆ . ಭ್ರಷ್ಟಾಚಾರ ನಿಗ್ರಹ ದಳ ಲೋಕಪಾಲ್‌ಗೆ 33.32ಕೋಟಿ ರೂ ಹಂಚಿಕೆಯಾಗಿದ್ದು ಹಾಗೂ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್‌ಗೆ 51.31 ಕೋಟಿ ರೂ ನೀಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ. ಸಾಲ!
ಉನ್ನತ ಶಿಕ್ಷಣವನ್ನು ಪಡೆಯಲು ಹಣದ ತೊಂದರೆ ಎದುರಿಸುವ ಯುವಕರನ್ನು ಗಮನದಲ್ಲಿಟ್ಟುಕೊಂಡು ಸಾಲ ಯೋಜನೆಯನ್ನು ಘೋಷಿಸಲಾಗಿದೆ. ಇದರನ್ವಯ, ದೇಶಿ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲವನ್ನು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಇ-ವೋಚರರ್‌ಗಳನ್ನು° ಪ್ರತಿ ವರ್ಷ 1 ಲಕ್ಷ ರೂ. ವಿದ್ಯಾರ್ಥಿಗಳಿಗೆ ನೇರವಾಗಿ ಸಾಲದ ಮೊತ್ತದ ಶೇಕಡಾ 3 ರಷ್ಟು ವಾರ್ಷಿಕ ಬಡ್ಡಿ ರಿಯಾಯಿತಿಗಾಗಿ ನೀಡಲಾಗುತ್ತದೆ.