Advertisement
ಬೆಳ್ತಂಗಡಿ ಕ್ಷೇತ್ರದ ಜಿ.ಪಂ. ಹಿ. ಪ್ರಾ ಶಾಲೆ ಕಜಕೆ ಮಲವಂತಿಗೆ, ಜಿ.ಪಂ. ಹಿ. ಪ್ರಾ ಶಾಲೆ ಕಾನರ್ಪ (ದಕ್ಷಿಣ ಕ್ಷೇತ್ರ),ಜಿ.ಪಂ. ಹಿ. ಪ್ರಾ ಶಾಲೆ ಕೊಡಿಯಾಲಬೈಲು ಕಾನರ್ಪ (ಪೂರ್ವ ಕ್ಷೇತ್ರ), ಜಿ.ಪಂ. ಹಿ. ಪ್ರಾ ಶಾಲೆ ಸಾವ್ಯ, ಸಮುದಾಯ ಭವನ ಬಾಂಜಾರು-ನೆರಿಯ ಗ್ರಾಮ, ಅಂಗನವಾಡಿ ಕೇಂದ್ರ ಪುರಿಯ-ಮಾಲಾಡಿ ಗ್ರಾಮ, ದ.ಕ.ಜಿ.ಪಂ. ಹಿ. ಪ್ರಾ ಶಾಲೆ ಅನಾರು-ಪಟ್ರಮೆ, ಶ್ರೀ ವಿಷ್ಣುಮೂರ್ತಿ ಖಾಸಗಿ ಅನುದಾನಿತ ಹಿ.ಪ್ರಾ. ಶಾಲೆ ಪಟ್ಟೂರು-ಪಟ್ರಮೆ, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಪೆರ್ಲ ಶಿಬಾಜೆ ಹೊಂದಿದೆ. ಅದೇ ರೀತಿ, ವಿಟ್ಲ ಪರಿಸರದಲ್ಲಿ ಕೆಲ ದಿನಗಳ ಹಿಂದೆ ಇದ್ದ ಎರಡು ಶ್ಯಾಡೋ ಮತಗಟ್ಟೆಗಳಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ.
ದ.ಕ. ಜಿ.ಪಂ ಸಿಇಒ ಡಾ| ಕುಮಾರ್ ಅವರು ಪ್ರತಿಕ್ರಿಯಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮೀಣ ಮತಗಟ್ಟೆಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ (ಶ್ಯಾಡೋ ಏರಿಯ). ಆ ಪ್ರದೇಶವನ್ನು ಗುರುತಿಸಲಾಗಿದ್ದು, ವೆಯರ್‌ಲೆಸ್ ನೆಟ್‌ವರ್ಕ್ ಸೌಲಭ್ಯವನ್ನು ಅಳವಡಿಸಲಾಗುವುದು ಎನ್ನುತ್ತಾರೆ.