Advertisement
ಎನ್.ಡಿ.ಎ.ಯಿಂದ ಕೇಂದ್ರ ಪ್ರವಾಸೋದ್ಯಮ ಸಹಾಯಕ ಸಚಿವ ಆಲ್ಫೋನ್ಸ್ ಕಣ್ಣಾತ್ತಾ¤ನಂ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರು ಎರ್ನಾಕುಳಂ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವರು.ಇನ್ನೋರ್ವ ರಾಜ್ಯಸಭಾ ಸದಸ್ಯರಾಗಿರುವ ಮಲಯಾಳ ಚಲನಚಿತ್ರ ಮೇರು ನಟ ಸುರೇಶ್ ಗೋಪಿ ತೃಶ್ಯೂರ್ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವರು.
ಈ ಬಾರಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುಸುತ್ತಿರುವ ಎಡರಂಗದ ಅರೂರ್ ಕ್ಷೇತ್ರದ ಎ.ಎಂ. ಆರೀಫ್, ಆರನ್ಮುಳ ಶಾಸಕಿ ವೀಣಾ ಜಾರ್ಜ್, ಕಲ್ಲಿಕೋಟೆ ನಾರ್ತ್ ಶಾಸಕ ಎ. ಪ್ರದೀಪ್ ಕುಮಾರ್, ನಿಲಂಬೂರು ಶಾಸಕ ಪಿ.ವಿ. ಅನ್ವರ್, ನಿಡುಮ್ಮಾಂಗಾಡ್ ಶಾಸಕ ಸಿ. ದಿವಾಕರನ್, ಅಡೂರು ಶಾಸಕ ಚಿಟ್ಟಯಂ ಗೋಪ ಕುಮಾರ್ ಎಂಬವರಾಗಿರುವರು. ಐಕ್ಯರಂಗದ ವಟ್ಟಿಯೂರ್‌ಕಾವ್ ಶಾಸಕ ಕೆ. ಮುರಳೀಧರನ್, ಕೋನಿ ಶಾಸಕ ಅಡೂರ್ ಪ್ರಕಾಶ್, ಎರ್ನಾಕುಳಂ ಶಾಸಕ ಹೈಬಿ ಈಡನ್ ಎಂಬವರು ಈ ಬಾರಿ ಚುನಾವಣ ಕಣದಲ್ಲಿದ್ದಾರೆ.
Related Articles
Advertisement
ಹಾಲಿ ಎಂ.ಪಿ.ಗಳು ಸುರಕ್ಷಿತರು: ಗೆದ್ದರೂ ಸೋತರೂ ನಷ್ಟವಿಲ್ಲಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜ್ಯ ಸಭಾ ಸದಸ್ಯರಾದ ಅಲ್ಫೋನ್ಸ್ ಕಣ್ಣಾತ್ತಾನಂ ಮತ್ತು ಸುರೇಶ್ ಗೋಪಿಯವರು ಕ್ಷೇತ್ರದಲ್ಲಿ ಪರಾಜಿತರಾದರೂ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿರುವರು. ಈ ಎಂ.ಪಿ.ಗಳು ಗೆಲುವು ಸಾಧಿಸಿದಲ್ಲಿ ಲೋಕಸಭಾ ಸದಸ್ಯರಾಗುತ್ತಾರೆ. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಾಸಕರು ಪರಾಜಿತರಾದಲ್ಲಿ ಶಾಸಕರಾಗಿ ಮುಂದುವರಿಯಲಿರುವರು. ಗೆದ್ದರೆ ಸಂಸದರಾಗಿ ಆಯ್ಕೆಯಾಗಲಿರುವರು. ಅದುದರಿಂದ ಇವರು ಸೋತರೂ ಗೆದ್ದರೂ ಪಕ್ಷಕ್ಕಾಗಲೀ, ಅಭ್ಯರ್ಥಿಗಳಿಗಾಗಲೀ ಯಾವುದೇ ನಷ್ಟವಿಲ್ಲ. ಆದರೆ ಶಾಸಕರು ಗೆದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಬೇಕಿದೆ. ಹಾಲಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾದಲ್ಲಿ ಆ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯ ಖರ್ಚು ವೆಚ್ಚವನ್ನು ಇವರಿಂದಲೇ ಭರಿಸಬೇಕೆಂಬುದಾಗಿ ಓರ್ವ ಮತದಾರರು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಎಡರಂಗ ಮತ್ತು ಐಕ್ಯರಂಗಗಳು ಅತ್ಯಂತ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ.ಎನ್‌ಡಿಎ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆದಂತೆ ಈ ಬಾರಿ ಲೋಕಸಭಾ ಚುನಾವಣೆ ಯಲ್ಲೂ ಖಾತೆ ತೆರೆಯಿರುವ ಭರವಸೆಯಲ್ಲಿದೆ.ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶದಲ್ಲಿ ರಾಜ್ಯ ಎಡರಂಗ ಸರಕಾರದ ಆಚಾರ ಉಲ್ಲಂಘನೆಯ ನಿಲುವು ಮತ್ತು ಅದರ ಪ್ರತಿಫಲವು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂಬುದು ಎನ್.ಡಿ.ಎ. ಮತ್ತು ಕಾಂಗ್ರೆಸ್ ಪಕ್ಷಗಳ ಅಭಿಪ್ರಾಯವಾಗಿದೆ. ಶಬರಿಮಲೆ ಕ್ಷೇತ್ರ ಹೊಂದಿರುವ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಂಕಿ ಚೆಂಡು ಕೆ. ಸುರೇಂದ್ರನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಉಳಿದಂತೆ ತಿರುವನಂತಪುರ, ತೃಶ್ಯೂರ್,ವಡಗರ, ಕಣ್ಣೂರು, ಆಲಪ್ಪುಯ ಎರ್ನಾಕುಳಂ, ಕಾಸರಗೋಡು ಸೇರಿದಂತೆ ಜಿದ್ದಾಜಿದ್ದಿನ ತ್ರಿಕೋನ ಸ್ಫರ್ಧೆಯ ಹೋರಾಟದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೂ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ರಾಹುಲ್ ಕೇಂದ್ರ ಬಿಂದು
ಕೇರಳದ ವಯನಾಡ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಫರ್ಧಿಸುತ್ತಿರುವುದು ದೇಶದಾದ್ಯಂತ ಗಮನ ಸೆಳೆದಿದೆ. ಐಕ್ಯರಂಗದಲ್ಲಿ ಸಂಚಲನ ಮೂಡಿಸಿದರೆ ಎಡರಂಗದಲ್ಲಿ ಆತಂಕಕ್ಕೆಡೆ ಮಾಡಿದೆ. ನೆರೆಯ ಕರ್ನಾಟಕದಲ್ಲಿ ಮಹಾಘಟಬಂದನ್ ಮೂಲಕ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಮೈತ್ರಿ ಪಕ್ಷಗಳು ಇಲ್ಲಿ ಪರಸ್ಪರ ವಿರುದ್ಧ ಸ್ಪ#ರ್ಧಿಗಳಾಗಿವೆ. ಮಹಾಘಟಬಂದನ್ ನಿಲುವಿನ ವಿರುದ್ಧ ಹೇಳಿಕೆಗಳಾಗಿವೆ. ಒಟ್ಟಿನಲ್ಲಿ ಮಾಗಿದ ರಾಜಕೀಯ ರಾಜ್ಯದಲ್ಲಿ ಬಿಸಿಲ ತಾಪಮಾನದೊಂದಿಗೆ ಚುನಾವಣೆಯ ಕಾವು ಏರುತ್ತಿದೆ.