Advertisement

Europe ದೇಶಗಳಿಗೆ ಅಕ್ರಮ ಮಾನವ ಸಾಗಾಟ: 4 ಬಾಂಗ್ಲಾ ಪ್ರಜೆಗಳು ಸೇರಿ 9 ಮಂದಿ ಅರೆಸ್ಟ್

08:18 PM Jan 15, 2024 | Team Udayavani |

ಹೊಸದಿಲ್ಲಿ: ದೆಹಲಿ ಪೊಲೀಸರು ಸೋಮವಾರ ಅಕ್ರಮ ದಾಖಲೆಗಳ ಆಧಾರದ ಮೇಲೆ ಜನರನ್ನು ಯುರೋಪಿಯನ್ ದೇಶಗಳಿಗೆ ಕಳುಹಿಸುತ್ತಿದ್ದ ಅಂತಾರಾಷ್ಟ್ರೀಯ ದಂಧೆಯನ್ನು ಭೇದಿಸಿದ್ದು, ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸುರುವುದಾಗಿ ಹೇಳಿದ್ದಾರೆ.

Advertisement

ಆರೋಪಿಗಳು ಕುಖ್ಯಾತ “ಕತ್ತೆ ಮಾರ್ಗ” ವನ್ನು ನಕಲಿ ಕೆಲಸದ ಪರವಾನಗಿಗಳನ್ನು ಪಡೆಯುವ ಮೂಲಕ ಬಳಸುತ್ತಿದ್ದರು ಮತ್ತು ಪ್ರಯಾಣಿಕರಿಂದ ತಲಾ 15 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 4 ರಂದು ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ್ ಅನೋವರ್ ಕಾಜಿ (22) ಮತ್ತು ಮೊಹಮ್ಮದ್ ಖೋಲಿಲುರ್ ರೆಹಮಾನ್ (22) ಅವರನ್ನು ಬಂಧಿಸುವುದರೊಂದಿಗೆ ದಂಧೆಯನ್ನು ಭೇದಿಸಲಾಗಿದೆ. ಅಲಿ ಅಕ್ಬರ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಮುದಾಸಿರ್ ಖಾನ್, ಬರೇಂದ್ರ ಆರ್ಯ, ಧೀರಜ್ ಬಿಷ್ಣೋಯ್, ಗೌರವ್ ಗುಲಾತಿ ಮತ್ತು ಮೊಹಮ್ಮದ್ ಯೂನಸ್ ಅವರನ್ನು ಕಾಜಿ ಮತ್ತು ರೆಹಮಾನ್ ಬಂಧನದ ನಂತರ ಬಂಧಿಸಲಾಯಿತು. ಬಾಂಗ್ಲಾದೇಶದ ಪ್ರಜೆಗಳು ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Donkey route ಮಾರ್ಗವು ದೇಶಗಳಿಗೆ ಅನಧಿಕೃತ ಪ್ರವೇಶಕ್ಕಾಗಿ ಬಳಸಲಾಗುವ ಅಕ್ರಮ ವಲಸೆ ತಂತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next