ನೋಯ್ಡಾ: ಹೊಟೇಲ್ ವೊಂದರ ಲಿಫ್ಟ್ ಕುಸಿದು ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿರುವುದು ವರದಿಯಾಗಿದೆ.
ಬರೌಲಾ ಬಳಿಯ ಸೆಕ್ಟರ್ 49 ರಲ್ಲಿನ ರೆಜೆಂಟಾ ಎಂಬ ಹೋಟೆಲ್‌ನ ಲಿಫ್ಟ್ ಕುಸಿದಿದೆ. ಲಿಫ್ಟ್ ಮೂರನೇ ಮಹಡಿಯಿಂದ ನೆಲ ಮಹಡಿಗೆ ಕುಸಿದಿದೆ. ಈ ವೇಳೆ ಲಿಫ್ಟ್ ನಲ್ಲಿ ಒಟ್ಟು ಒಂಬತ್ತು ಮಂದಿ ಇದ್ದರು. ಕುಸಿತದ ಪರಿಣಾಮ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂವರ ಮೂಳೆಗಳು ಮುರಿತವಾಗಿವೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಶಕ್ತಿ ಅವಸ್ತಿ ಹೇಳಿದ್ದಾರೆ.
ಇದನ್ನೂ ಓದಿ: ಕಾರು ಅಪಘಾತ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಗಾಯ
ಪ್ರಾಥಮಿಕ ಮಾಹಿತಿಯ ಪ್ರಕಾರ ಓವರ್ ಲೋಡ್ ನಿಂದ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ಗ್ರೇಟರ್ ನೋಯ್ಡಾ ಸೊಸೈಟಿಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು.ಆಲ್ಫಾ 2 ಸೆಕ್ಟರ್‌ನಲ್ಲಿನ ಗಾಲ್ಫ್ ಗಾರ್ಡೆನಿಯಾ ಸೊಸೈಟಿಯಲ್ಲಿನ ಲಿಫ್ಟ್ ನೆಲ ಮಹಡಿಯಿಂದ ಕುಸಿದ ಪರಿಣಾಮ ಎರಡು ವರ್ಷದ ಮಗು ಮತ್ತು ಇಬ್ಬರು ಹಿರಿಯರು ಸೇರಿದಂತೆ ಕುಟುಂಬದ ಎಂಟು ಜನರು ಗಾಯಗೊಂಡು, ಸುಮಾರು ಎರಡು ಗಂಟೆಗಳ ಕಾಲ ಲಿಫ್ಟ್ ನಲ್ಲೇ ಸಿಲುಕಿದ್ದರು.