ವಾರ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವಾರ ಏಳು ಚಿತ್ರಗಳು ತೆರೆಕಂಡರೆ ಈ ವಾರ ಆ ದಾಖಲೆಯನ್ನು ಮುರಿಯುವ ಮಟ್ಟಕ್ಕೆ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ವಾರ ಬರೋಬ್ಬರಿ 9 ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡ ಚಿತ್ರರಂಗದ ರಂಗೇರಿದಂತಾಗಿದೆ.
ತೆರೆಕಾಣುತ್ತಿರುವ ಚಿತ್ರಗಳು ಯಾವುದೆಂದು ನೋಡುವುದಾದರೆ “ಮೈಸೂರು ಡೈರೀಸ್’, “ಪಂಖುರಿ’, “ವಿಜಯಾನಂದ’, “ಪ್ರಾಯಶಃ’, “ಬಾಂಡ್ ರವಿ’, “56′, “ಕ್ಷೇಮಗಿರಿಯಲ್ಲಿ ಕರ್‌ನಾಟಕ’, “ನಾನೇ ನರರಾಕ್ಷಸ’, “ಸುನಾಮಿ 143′ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಈ ವಾರ ತೆರೆ ಕಾಣುತ್ತಿರುವ ಬಹುತೇಕ ಚಿತ್ರಗಳು ಬೇರೆ ಬೇರೆ ಜಾನರ್ ಗೆ ಸೇರಿವೆ. ಲವ್ ಸ್ಟೋರಿ, ಆ್ಯಕ್ಷನ್, ಥ್ರಿಲ್ಲರ್ ಜೊತೆಗೆ “ವಿಜಯಾನಂದ’ ಚಿತ್ರ ಬಯೋಪಿಕ್ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಕಾಣುತ್ತಿದೆ.
ಇನ್ನು, ಪ್ರಿಯಾಮಣಿ ನಟನೆಯ ಚಿತ್ರವೊಂದು ಈ ವಾರ ತೆರೆಕಾಣುತ್ತಿದೆ. ಅದು “56′. ಸೈನ್ಸ್ ಫಿಕ್ಷನ್ ಜಾನರ್‌ನ ಈ ಚಿತ್ರ ಮೆಡಿಕಲ್ ಮಾಫಿಯಾ ಹಿನ್ನೆಲೆಯಲ್ಲಿ ಸಾಗಲಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ಸಿಬಿಐ ಆಫೀಸರ್ ಆಗಿ ನಟಿಸಿದ್ದಾರೆ. ಇದರ ಜೊತೆಗೆ ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಗಮನ ಸೆಳೆದ ಮತ್ತೂಂದು ಚಿತ್ರವೆಂದರೆ ಅದು “ಬಾಂಡ್ ರವಿ’. ಪ್ರಮೋದ್ ನಾಯಕರಾಗಿ ನಟಿಸಿರುವ ಈ ಚಿತ್ರ ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಪ್ರಮೋದ್‌ಗೆ ಆ್ಯಕ್ಷನ್ ಹೀರೋ ಇಮೇಜ್ ಕೂಡಾ ಸಿಗಲಿದೆ