ಹೊಸದಿಲ್ಲಿ: ಇಂಧನ ಬೆಲೆ ಏರಿಕೆ ಕೇಂದ್ರ ಸರಕಾರದ ಕೈಯಲ್ಲಿಲ್ಲ. ಅದು ಅಂತಾರಾಷ್ಟ್ರೀಯವಾಗಿ ನಿರ್ಧಾರವಾಗು ತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 220 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರು ಯಾವುದು?
1979-86ರ ಅವಧಿಯಲ್ಲಿ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಬೆಲೆ ಶೇ.126 ಮತ್ತು 2000-2007ರಲ್ಲಿ ಶೇ.60 ಏರಿಕೆ ಯಾಗಿದೆ. ಕಳೆದ 7 ವರ್ಷಗಳಲ್ಲಿ ಶೇ. 30 ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಕಚ್ಚಾ ತೈಲಕ್ಕಿಂತ ಹೆಚ್ಚಿನ ಬೇಡಿಕೆಯಿದೆ. ಇದರಿಂದಾಗಿ ಬೆಲೆ ಏರಿಕೆ ಯಾಗುತ್ತಿದೆ. ಕಚ್ಚಾ ತೈಲದ ಬೆಲೆ ವಿನಿಮಯ ದರ, ಸರಕು ಸಾಗಣೆ ಮತ್ತು ಡೀಲರ್ ಬೆಲೆ ಆಧಾರಿತವಾಗಿರುತ್ತದೆ ಎಂದು ಲೋಕಸಭೆಗೆ ಅವರು ತಿಳಿಸಿದ್ದಾರೆ.
ಪೆಟ್ರೋಲ್ ಜತೆ ಎಥೆನಾಲ್ ಬೆರೆಸುವ ವಿಚಾರದಲ್ಲಿ ಮಾತನಾಡಿದ ಅವರು, “ಶೇ.9 ಎಥೆನಾಲ್ ಬೆರೆಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. 2025ರ ವೇಳೆಗೆ ಶೇ.20ರಷ್ಟು ಪ್ರಮಾಣದಲ್ಲಿ ಎಥೆನಾಲ್ ಬೆರೆಸುವ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು.
ರಿವರ್ಸ್ ರೆಪೋ ದರ ಹೆಚ್ಚಳ ಸಾಧ್ಯತೆ?
ಮುಂಬಯಿ: ಆರ್‌ಬಿಐನ ವಿತ್ತೀಯ ನೀತಿ ಪರಿಶೀಲನ ಸಭೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ರಿಸರ್ವ್ ರೆಪೋ ದರವನ್ನು ಶೇ. 0.20ರಿಂದ ಶೇ.0.25ರವರೆಗೆ ಪರಿಷ್ಕರಿಸುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣ, ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಸಂಬಂಧಿಸಿದ ವಿಚಾರಗಳು ಪ್ರೋತ್ಸಾಹದಾಯಕವಾಗಿಲ್ಲ. ಹೀಗಾಗಿ ಇಂಥ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ಯಾಂಕ್‌ಗಳು ತಮ್ಮಲ್ಲಿ ಇರುವ ಹೆಚ್ಚುವರಿ ಹಣವನ್ನು ಆರ್‌ಬಿಐನಲ್ಲಿ ಇರಿಸುವ ಠೇವಣಿಗೆ ವಿಧಿಸುವ ಬಡ್ಡಿದರಕ್ಕೆ ರಿವರ್ಸ್ ರೆಪೋ ಎಂದು ಹೆಸರು.