Advertisement
ಇಷ್ಟೊಂದು ವೆಚ್ಚದಿಂದ ಉತ್ತರ ಕರ್ನಾಟಕದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ವರ್ಷ ವರ್ಷವೂ ಅಧಿವೇಶನ ನಡೆಯುತ್ತದೆಯೇ ವಿನಾ ಯಾವ ಪ್ರಯೋಜನವೂ ಆಗಿಲ್ಲ ಎಂಬ ವ್ಯಾಪಕ ಅಸಮಾಧಾನದ ನಡುವೆಯೇ ಈ ವರ್ಷದ ಅಧಿವೇಶನಕ್ಕೆ 13.21 ಕೋಟಿ ರೂ. ನೀಡುವಂತೆ ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
Related Articles
Advertisement
ಇದಲ್ಲದೆ ಅಧಿವೇಶನದ ವೇಳೆ ವಿವಿಧ ಸಂಘಟನೆಗಳು ನಡೆಸುವ ಪ್ರತಿಭಟನೆಗಳಿಗೆ ಸ್ಥಳಾವಕಾಶ ಒದಗಿಸಲು ಬೇಕಾಗುವ ಭೂಮಿ ಬಾಡಿಗೆಯು 8 ಲಕ್ಷ ರೂ. ದಾಟಿರುವುದು ಅಧಿವೇಶನದ ಸಾರ್ಥಕತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಮತ್ತು ಸಿಬಂದಿಯ ಉಪಾಹಾರ ಮತ್ತು ಊಟದ ಖರ್ಚು 2.8 ಕೋ.ರೂ. ಆಗುವ ನಿರೀಕ್ಷೆಯಿದೆ. ಇಂಟರ್ನೆಟ್ ಸೌಲಭ್ಯ ಮತ್ತು ದೂರವಾಣಿಗೆ 44 ಲಕ್ಷ ರೂ. , ವಾಹನಗಳ ಇಂಧನಕ್ಕೆ 45 ಲಕ್ಷ ರೂ., ತುರ್ತು ಬಾಡಿಗೆ ವಾಹನಗಳಿಗೆ 25 ಲಕ್ಷ ರೂ., ಚಾಲಕರ ವಸತಿಗೆ 20 ಲಕ್ಷ ರೂ., ಕಟ್ಟಡಗಳ ಅಲಂಕಾರಕ್ಕೆ 15 ಲಕ್ಷ ರೂ. ಸ್ವತ್ಛಯ ಸಿಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗಳಿಗೆ 25 ಲಕ್ಷ ರೂ. ಹೆಚ್ಚುವರಿ ವೆಚ್ಚ ನಿಗದಿ ಮಾಡಲಾಗಿದೆ.
ಇದಲ್ಲದೆ ಅಧಿವೇಶನದ ವೇಳೆ ಸುವರ್ಣ ವಿಧಾನಸೌಧದ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸುಮಾರು 15 ಲಕ್ಷ ರೂ., ಅಧಿವೇಶನ ಮಾಹಿತಿ ಕೈಪಿಡಿಗಳು, ವಿವಿಧ ಗುರುತಿನ ಚೀಟಿಗಳಿಗೆ 4 ಲಕ್ಷ ರೂ., ಸರಕಾರಿ ವಾಹನ ಚಾಲಕರ ನಿರ್ವಹಣ ವೆಚ್ಚಕ್ಕಾಗಿ 25 ಸಾವಿರ ರೂ. ನಿಗದಿ ಪಡಿಸಲಾಗಿದೆ. ಕೇವಲ ಅಧಿವೇಶನಗಳಿಗಾಗಿ 19 ವರ್ಷಗಳಲ್ಲಿ ಅಂದಾಜು 140 ಕೋ.ರೂ. ಖರ್ಚು ಮಾಡಲಾಗಿದೆ. ಮೊದಲ ಅಧಿವೇಶನಕ್ಕೆ ಇದ್ದ 5 ಕೋಟಿ ಖರ್ಚು ಈಗ 20 ಕೋ.ರೂ. ಸಮೀಪಕ್ಕೆ ಬಂದು ನಿಂತಿದೆ. ಇದರಿಂದ ಉತ್ತರ ಕರ್ನಾಟಕದ ಚಿತ್ರಣ ಮಾತ್ರ ಬದಲಾಗಿಲ್ಲ. ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಮೂಲಭೂತ ಸೌಲಭ್ಯಗಳ ಸಮಸ್ಯೆ ಬಗೆಹರಿದಿಲ್ಲ. ಹಾಗಾದರೆ 140 ಕೋಟಿ ರೂ. ಖರ್ಚು ಮಾಡಿ ಅಧಿವೇಶನ ನಡೆಸಿದ್ದು ಯಾವ ಸಾರ್ಥಕತೆಗೆ ಎಂಬುದು ಈ ಭಾಗದ ಜನರ ಪ್ರಶ್ನೆ.
ಅಧಿವೇಶನವು ಸುಗಮವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖರ್ಚು ವೆಚ್ಚದ ಪ್ರಮಾಣವನ್ನು ಕಡಿಮೆ ಮಾಡಲು ಗಮನಹರಿಸಲಾಗುವುದು. ಈ ಬಾರಿಯ ಅಧಿವೇಶನಕ್ಕೆ 13.21 ಕೋ.ರೂ. ವೆಚ್ಚದ ನಿರೀಕ್ಷೆಯಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.– ಮೊಹಮ್ಮದ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ - ಕೇಶವ ಆದಿ