Advertisement

ಸುಕ್ಮಾದಲ್ಲಿ ನಕ್ಸಲ್‌ ದಾಳಿ 9 ಯೋಧರು ಹುತಾತ್ಮ

01:06 AM Mar 14, 2018 | |

ರಾಯ್ಪುರ: ನಕ್ಸಲರ “ನೆತ್ತರ ನೆಲ’ವಾಗಿರುವ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ “ಕೆಂಪು ರಕ್ಕಸರು’ ಮತ್ತೆ ರಕ್ತದೋಕುಳಿಯಾಡಿದ್ದಾರೆ. ಕಾರ್ಯಾಚರಣೆಗಾಗಿ ವಾಹನವೊಂದರಲ್ಲಿ ತೆರಳುತ್ತಿದ್ದ ಕರ್ನಾಟಕದ ಹಾಸನ ಮೂಲದ ಯೋಧ ಚಂದ್ರು ಸೇರಿ ಸಿಆರ್‌ಪಿಎಫ್ನ 9
ಯೋಧರನ್ನು ನೆಲಬಾಂಬ್‌ಗಳನ್ನು ಸ್ಫೋಟಿಸುವ ಮೂಲಕ ಹತ್ಯೆ ಮಾಡಿದ್ದಾರೆ.

Advertisement

ವಾಹನವು ಕಿಸ್ತಾರಾಮ್‌-ಪಲೊಡಿಯ ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದಾಗ ಒಂದಕ್ಕಿಂತ ಹೆಚ್ಚು ಸುಧಾರಿತ ಸ್ಫೋಟಕ ಸಾಮಗ್ರಿಗಳು (ಐಇಡಿ), ಏಕಕಾಲದಲ್ಲಿ ಸ್ಫೋಟಗೊಂಡವು. ಘಟನೆಯಲ್ಲಿ 9 ಯೋಧರು ಸ್ಥಳದಲ್ಲೇ ಮೃತಪಟ್ಟರು. ತೀವ್ರ ವಾಗಿ ಗಾಯಗೊಂಡಿದ್ದ
ಇಬ್ಬ ರನ್ನು ಹೆಲಿಕಾಪ್ಟರ್‌ ಮೂಲಕ ರಾಯ್ಪುರದ ಆಸ್ಪತ್ರೆಗೆ ಸಾಗಿಸಲಾಯಿತು.

ಮಂಗಳವಾರ ಬೆಳಗ್ಗೆಯಿಂದಲೂ ಸಿಆರ್‌ಪಿಎಫ್ ಯೋಧರಿಗೆ ನಕ್ಸಲರೊಂದಿಗೆ ಕಾದಾಟ ಶುರುವಾಗಿತ್ತು. ಬೆಳಗ್ಗೆ ಸುಮಾರು 8 ಗಂಟೆಗೆ, ಸುಕ್ಮಾ ಪ್ರಾಂತ್ಯದಲ್ಲೇ ನಕ್ಸಲರ ಒಂದು ಗುಂಪು ಹಾಗೂ ಸಿಆರ್‌ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದಾಗಿ, ಕೆಲವೇ ಗಂಟೆಗಳಲ್ಲಿ ನಕ್ಸಲರು ಹೀಗೆ ಅಟ್ಟಹಾಸ ಮೆರೆದಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವು  ನೆಲಬಾಂಬ್‌ ಸ್ಫೋಟಕ ಪ್ರತಿಬಂಧಕವಾಗಿತ್ತಾದರೂ, ಏಕಾಏಕಿ ಹಲವಾರು ಐಇಡಿಗಳು ಸಿಡಿದಿದ್ದರಿಂದಾಗಿ ಅದಕ್ಕೆ ಹಾನಿಯಾಗಿದೆ
ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ ಸಿಂಗ್‌, ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ
ಖಂಡಿಸಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಪ್ರತಿಕ್ರಿಯೆ ನೀಡಿರುವ ಮಮತಾ, “ಘಟನೆಯಲ್ಲಿ ಮಡಿದ ಯೋಧರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಬರುವಂತಾಗಲಿ” ಎಂದಿದ್ದಾರೆ.

ಹಾಸನದ ಯೋಧ ಹುತಾತ್ಮ
ಈ ಸ್ಫೋಟ ದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಹರದೂರು ಗ್ರಾಮದ ಯೋಧ ಎಚ್‌.ಎಸ್‌ ಚಂದ್ರು(29) ಹುತಾತ್ಮರಾಗಿದ್ದಾರೆ. ಬುಧವಾರ ಸಂಜೆ ವೇಳೆಗೆ ಅವರ ಪಾರ್ಥಿವ ಶರೀರ ಹಾಸನಕ್ಕೆ ಬರುವ ನಿರೀಕ್ಷೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಚಂದ್ರು ಹರದೂರು ಗ್ರಾಮದ ಸ್ವಾಮಿಗೌಡ ಅವರ ಪುತ್ರರಾಗಿದ್ದು 2014ರಲ್ಲಿ ಸಿಆರ್‌ಪಿಎಫ್ಗೆ ಸೇರಿದ್ದರು.

ನಕ್ಸಲರ ಅಟ್ಟಹಾಸ
ಏ. 6, 2010: ಟಾಡೆಲ್ಟಾ ಹಳ್ಳಿ ಸನಿಹ ದಾಳಿ. 75 ಯೋಧರ ಸಾವು
ಮಾ. 11, 2014: ಟೋಂಗಾ³ಲ್‌ ಹಳ್ಳಿ ಬಳಿ ದಾಳಿ. 15 ಯೋಧರ ಹತ್ಯೆ
ಡಿ. 1, 2014: ಕಸಾಳ್ಪಾರಾ ಗ್ರಾಮದ ಸಮೀಪ ದಾಳಿಗೆ 14 ಯೋಧರು ಬಲಿ
ಮಾ. 11, 2017: ಸುಕ್ಮಾದಲ್ಲಿ ದಾಳಿಗೆ 12 ಯೋಧರು ಹುತಾತ್ಮ
ಏ.24, 2017: ಸುಕ್ಮಾದಲ್ಲಿ 25 ಯೋಧರ ಸಾವು

Advertisement
Advertisement

Udayavani is now on Telegram. Click here to join our channel and stay updated with the latest news.

Next