ಬೆಂಗಳೂರು: ಸಿನಿಮೀಯ ಮಾದರಿಯಲ್ಲಿ ಹೊಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕೊಕೇನ್ ಕ್ಯಾಪ್ಸೂಲ್‌ಗಳನ್ನು ಸಾಗಾಟ ಮಾಡುತ್ತಿದ್ದ 40 ವರ್ಷದ ಬ್ರೆಜಿಲ್ ಪ್ರಜೆಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಆರ್‌ಐ ಅಧಿಕಾರಿ ಗಳು ಬಂಧಿಸಿದ್ದಾರೆ. ಆತನ ಹೊಟ್ಟೆಯಲ್ಲಿದ್ದ 9.20 ಕೋಟಿ ರೂ. ಮೌಲ್ಯದ 91 ಕೊಕೇನ್ ಕ್ಯಾಪ್ಸೂಲ್‌ಗಳನ್ನು ಹೊರ ತೆಗೆದು ವಶಕ್ಕೆ ಪಡೆಯಲಾಗಿದೆ.
ಫೆ.9ರಂದು ಮುಂಜಾನೆ ಬ್ರೆಜಿಲ್ ದೇಶದಿಂದ ದುಬೈ ಮಾರ್ಗವಾಗಿ ಬೆಂಗ ಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವೊಂದು ಬಂದಿತ್ತು. ಇದೇ ವೇಳೆ ಬ್ರೆಜಿಲ್‌ನಿಂದ ಅಕ್ರಮವಾಗಿ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಮಾಹಿತಿ ದೊರೆತ ಡಿಆರ್‌ಐ ಅಧಿಕಾರಿಗಳು, ನಿರ್ದಿಷ್ಟ ವಿಮಾನದ ಎಲ್ಲ ಪ್ರಯಾಣಿ ಕರನ್ನು ತಪಾಸಣೆಗೊಳಪಡಿಸಿದ್ದರು. ಆಗ ಭಾರತೀಯ ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿಯ ವರ್ತನೆ ಕಂಡು ಅನುಮಾನ ಬಂದಿದೆ. ಕೂಡಲೇ ಆತನ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಯಾವುದೇ ವಸ್ತುಗಳು ಕಂಡು ಬಂದಿಲ್ಲ.
ಆದರೆ, ಆತನ ದೇಹದಲ್ಲಿ ಸ್ವಲ್ಪ ಬದ ಲಾವಣೆಯಾಗಿತ್ತು. ತುಂಬಾ ಆಯಾಸ ಗೊಂಡಿದ್ದ. ಅನುಮಾನದ ಮೇರೆಗೆ ವಶಕ್ಕೆ ಪಡೆದುಕೊಂಡು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯೊಳಗೆ ಕ್ಯಾಪ್ಸೂ ಲ್‌ಗಳು ಇರುವುದು ಪತ್ತೆಯಾಗಿತ್ತು.
ಆ ಕ್ಯಾಪ್ಸೂಲ್‌ಗಳನ್ನು ಹೊರ ತೆಗೆಯಲು ಆರೋಪಿಗೆ ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿ ಸಲಾಗಿತ್ತು. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.