Advertisement

86.5 ಲ.ರೂ. ವಿದ್ಯಾರ್ಥಿ ಸಹಾಯಧನ ವಿತರಣೆ

07:30 AM Aug 28, 2017 | Team Udayavani |

ಉಡುಪಿ: ವಿದ್ಯಾರ್ಥಿಗಳಿಗೆ ಪೋಷಕ ಸ್ಥಾನದಲ್ಲಿ ನಿಂತು ಸಹಾಯ ನೀಡುತ್ತಿರುವ ವಿದ್ಯಾಪೋಷಕ್‌ನಿಂದ ಪ್ರಸಕ್ತ ಸಾಲಿನಲ್ಲಿ 1,165 ವಿದ್ಯಾರ್ಥಿಗಳಿಗೆ ಒಟ್ಟು 86.5 ಲ.ರೂ. ಸಹಾಯಧನ ವಿತರಿಸಲಾಯಿತು.

Advertisement

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಾಂಕೇತಿಕವಾಗಿ ವಿದ್ಯಾರ್ಥಿ ಸಹಾಯಧನವನ್ನು ವಿತರಿಸಿದರು.

ವಿದ್ಯೆ ಮತ್ತು ಕಲೆ ಸೂರ್ಯ ಚಂದ್ರರಿದ್ದಂತೆ. ಇವುಗಳಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ ಸಕಾಲದಲ್ಲಿ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ಸ್ವಾವಲಂಬಿಗಳಾದ ಮೇಲೆ ಮರು ಸಮರ್ಪಣೆ ಮಾಡುವುದು ವಿದ್ಯಾಪೋಷಕ್‌ನ ಬಹುದೊಡ್ಡ ಆಸ್ತಿ ಎಂದು ಪೇಜಾವರ ಶ್ರೀಗಳು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿ. ಶಂಕರ ಫ್ಯಾಮಿಲಿ ಟ್ರಸ್ಟ್‌ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್‌ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಪರವಾಗಿ ಸಹಾಯ ಮಾಡುವ ಕಡೆಗೆ ಚಿಂತನೆ ನಡೆಸಬೇಕೆಂದು ಕೋರಿದರು.

ನೆರವು ವಿತರಣೆ
ಇದೇ ಸಂದರ್ಭದಲ್ಲಿ ಸೋಲಾರ್‌ ದೀಪಗಳ ಕೊಡುಗೆ, ಲ್ಯಾಪ್‌ಟಾಪ್‌ಮತ್ತು ಅಕ್ಷತಾ ದೇವಾಡಿಗ ಸ್ಮರಣಾರ್ಥ ಎಸ್‌ಪಿ ಅಣ್ಣಾಮಲೈ ಅವರು ಕೊಡ ಮಾಡುವ ವಿಶೇಷ ಪಾರಿತೋಷಕವನ್ನು ಹಸ್ತಾಂತರಿಸಲಾಯಿತು. ಜಿಲ್ಲೆಯ ಜನರ ಸಹಾಯಕ್ಕಾಗಿ ವಿಶೇಷ ನಿಧಿಯನ್ನು ತೆಗೆದಿರಿಸಿರುವ ಅದಾನಿ ಸಮೂಹದಿಂದ 25 ಲ.ರೂ. ಸಹಾಯಧನ ನೀಡುವುದಾಗಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಪ್ರಕಟಿಸಿದರು.

Advertisement

ವಿನೋಬಾ ಚಂದ್ರಶೇಖರ್‌ ಶೆಟ್ಟಿ ಕಾಪು ಪ್ರತಿಷ್ಠಾನದ ವಿಶ್ವಸ್ತರಾದ ಸೀಮಾ ಹರೀಶ್‌ ರೈ, ದುಬಾೖ ಫಾರ್ಚೂನ್‌ ಗ್ರೂಪ್‌ ಆಫ್ ಹೊಟೇಲ್ಸ್‌ನ ಪ್ರವೀಣ್‌ ಶೆಟ್ಟಿ, ಉಜ್ವಲ್‌ ಡೆವಲಪರ್ಸ್‌ನ ಪುರುಷೋತ್ತಮ ಶೆಟ್ಟಿ, ಅಮೆರಿಕದ ಡಾ| ಚಂದ್ರ ಕಾಪು, ಮಂಗಳೂರು ಇನ್ಫೋಸಿಸ್‌ ಪ್ರೇರಣಾದ ರಾಮ್‌ಪ್ರಸಾದ್‌, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ತಲ್ಲೂರು ಶಿವರಾಮ ಶೆಟ್ಟಿ, ಹೊಟೇಲ್‌ ಕಿದಿಯೂರಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಕೋಟ-ಮಣೂರು ಗೀತಾನಂದ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ. ಕುಂದರ್‌, ಮೈಸೂರಿನ ಜಯರಾಮ್‌ ಪಾಟೀಲ್‌, ಉಡುಪಿ ಭವಾನಿ ಎಂಟರ್‌ಪ್ರೈಸಸ್‌ನ ಪುರುಷೋತ್ತಮ ಪಾಟೀಲ್‌, ಪ್ರೈಮ್‌ ಸಂಸ್ಥೆಯ ರತ್ನಕುಮಾರ್‌, ಉಡುಪಿ ರಾಮಭವನದ ಯು. ವಿಶ್ವನಾಥ ಶೆಣೈ, ಮಲ್ಪೆ ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆ ಕಾರ್ತಿಕ್‌ ಎಂಟರ್‌ಪ್ರೈಸಸ್‌ನ ಹರಿಯಪ್ಪ ಕೋಟ್ಯಾನ್‌, ಉದ್ಯಾವರ ಯಶಸ್ವಿ ಫಿಶ್‌ಮೀಲ್‌ನ ಸಾಧು ಸಾಲಿಯಾನ್‌, ಯಕ್ಷಗಾನ ಕಲಾರಂಗದ ಎಸ್‌.ವಿ. ಭಟ್‌, ಗಂಗಾಧರ ರಾವ್‌ ಮತ್ತಿತರರು ಉಪಸ್ಥಿತರಿದ್ದರು.ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಕೆ. ಗಣೇಶ್‌ ರಾವ್‌ ಸ್ವಾಗತಿಸಿ, ಸದಾಶಿವ ರಾವ್‌ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಹೆಗಡೆ ಸಂದೇಶ ವಾಚಿಸಿದರು. ವಿ.ವಿ. ಶೆಟ್ಟಿ ಪ್ರಮಾಣ ವಚನ ಬೋಧಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next