ನವದೆಹಲಿ : ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಾರಿಗೆ ಅಲ್ಪಾವಧಿಯಲ್ಲೇ ಬಜೆಟ್ ಭಾಷಣವನ್ನು ಮುಗಿಸಿದರು. ಇದು ಅವರ 5ನೇ ಬಜೆಟ್ ಭಾಷಣವಾಗಿದ್ದು, ಕೇವಲ 86 ನಿಮಿಷಗಳಲ್ಲಿ ಇಡೀ ಆಯವ್ಯಯವನ್ನು ಅವರು ಓದಿದರು.
2020ರಲ್ಲಿ 160 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ ನಿರ್ಮಲಾ “ದೀರ್ಘಾವಧಿ ಬಜೆಟ್’ನ ಹೊಸ ದಾಖಲೆ ಬರೆದಿದ್ದರು. ಇದಕ್ಕಿಂತಲೂ ವಿಶೇಷವೆಂದರೆ, ನಿರ್ಮಲಾ ಅವರು ಬಜೆಟ್ ಓದಿ ಮುಗಿಸುವಷ್ಟು ಹೊತ್ತಿಗೆ, ಪ್ರಧಾನಿ ನರೇಂದ್ರ ಮೋದಿಯವರು ಒಟ್ಟು ಬರೋಬ್ಬರಿ 124 ಬಾರಿ ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದ್ದು ಕಂಡುಬಂತು.
ಬಜೆಟ್‌ನಲ್ಲಿನ ಒಂದೊಂದು ಘೋಷಣೆಯ ವೇಳೆಯೂ ಅವರ ಮೊಗದಲ್ಲಿ “ಸಂತೃಪ್ತಿ’ಯ ನಗು ಮೂಡುತ್ತಿತ್ತು. ಅದು ಮೇಜನ್ನು ಕುಟ್ಟುವ ಮೂಲಕ ಹೊರಬರುತ್ತಿತ್ತು. ಬಜೆಟ್ ನಂತರ ಮಾತನಾಡಿದ ಅವರು, “ಅಮೃತ ಕಾಲದ ಮೊದಲ ಬಜೆಟ್ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸಲಿರುವ ಅಡಿಗಲ್ಲಾಗಿದೆ’ ಎಂದಿದ್ದಾರೆ.