ಮಹಾಜನ ವರದಿ ಅನುಷ್ಠಾನ, ಮಹಾದಾಯಿ ವಿಚಾರದಲ್ಲಿ ಕಾಲು ಕೆದರಿಕೊಂಡು ಬರುತ್ತಿರುವ ಮಹಾರಾಷ್ಟ್ರದ ನಡೆ ಖಂಡಿಸುವುದೂ ಸೇರಿದಂತೆ ಆರು ನಿರ್ಣಯಗಳನ್ನು ಸಮ್ಮೇಳನ ತೆಗೆದುಕೊಂಡಿತು. ಕಸಾಪ ಅಧ್ಯಕ್ಷ, ನಾಡೋಜ ಡಾ| ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನೆರೆಯ ಆಂಧ್ರದ ಕನ್ನಡ ಶಾಲೆಗಳು ಮಾತ್ರವಲ್ಲದೆ, ಇತರ ರಾಜ್ಯಗಳಲ್ಲಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ರಕ್ಷಿಸಬೇಕು, ಈ ಮೂಲಕ ಕನ್ನಡ ಉಳಿಸಿ ಬೆಳೆಸಬೇಕು ಎಂದು ಒತ್ತಾಯಿಸಲಾಯಿತು. ಶಾಲೆಗಳಿದ್ದರಷ್ಟೇ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಸಮ್ಮೇಳನದ ನಿರ್ಣಯದಲ್ಲಿ ಅಭಿಪ್ರಾಯಪಡಲಾಯಿತು.
Advertisement
ನಿರ್ಣಯಗಳೇನು?1. ಮಹಾಜನ ವರದಿ ಅನುಷ್ಠಾನ ಮತ್ತು ವಿವಾದ ಅಂತ್ಯ
2. ಗಡಿವಿವಾದ ಕೆದಕುವ ಮಹಾರಾಷ್ಟ್ರದ ಉದ್ಧಟತನಕ್ಕೆ ಖಂಡನೆ.
3. ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು.
4. 371 ಜೆ ವಿಧಿ ಕಲಂ ಅಡಿಯಲ್ಲಿನ ಲೋಪದೋಷಗಳನ್ನು ಶೀಘ್ರವಾಗಿ ನಿವಾರಿಸುವುದರ ಜತೆಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ, ಪ್ರಾದೇಶಿಕ ಅಸಮತೋಲನ ನಿವಾರಣೆಯ
ಡಾ| ಡಿ.ಎಂ. ನಂಜುಡಪ್ಪ ಅನುಷ್ಠಾನ ವರದಿ ಜಾರಿಯ ತಾರತಮ್ಯ ನಿವಾರಣೆ.
5. ಕಲ್ಯಾಣ ಕರ್ನಾಟಕದ ಐತಿಹಾಸಿಕ ಸ್ಮಾರಕಗಳನ್ನು ಕಾಲಮಿತಿಯೊಳಗೆ ಅಭಿವೃದ್ಧಿ.