Advertisement

ಗಡಿಕೇಶ್ವಾರ: 2ಕೋಟಿ ವೆಚ್ಚದಲ್ಲಿ 850 ಟಿನ್‌ ಶೆಡ್‌

01:04 PM May 06, 2022 | Team Udayavani |

ಕಾಳಗಿ: ಮೇಲಿಂದ ಮೇಲೆ ಉಂಟಾಗುತ್ತಿದ್ದ ಭೂಕಂಪದಿಂದ ತತ್ತರಿಸಿದ್ದ ಗಡಿಕೇಶ್ವಾರ ಗ್ರಾಮಸ್ಥರ ಶೆಡ್‌ ನಿರ್ಮಾಣದ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ ಎಂದು ಚಿಂಚೋಳಿ ತಹಶೀಲ್ದಾರ್‌ ಅಂಜುಮ್‌ ತಬಸ್ಸುಮ್‌ ಹೇಳಿದರು.

Advertisement

ಗಡಿಕೇಶ್ವಾರ ಗ್ರಾಮದಲ್ಲಿ ಅಂದಾಜು ಎರಡು ಕೋಟಿ ರೂ. ಮೊತ್ತದಲ್ಲಿ 850 ಶೆಡ್‌ ಗಳ ನಿರ್ಮಾಣಕ್ಕೆ ಗುರುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸದಾಕಾಲ ತಮ್ಮೊಂದಿಗಿದೆ. ಯಾವುದೇ ಕಾರಣಕ್ಕೂ ಭಯಪಡುವ ಅವಶ್ಯಕತೆಯಿಲ್ಲ ಎಂದರು.

ಭೂಕಂಪದ ಸದ್ದು ಕೇಳಿದಾಗಲೊಮ್ಮೆ ಕಲಬುರಗಿ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಊಟ, ವಸತಿ ಸೇರಿದಂತೆ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸಲಾಗಿದೆ. ಈಗ ಟಿನ್‌ ಶೆಡ್‌ಗಳ ನಿರ್ಮಾಣಕ್ಕೂ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಗಡಿಕೇಶ್ವಾರ ಗ್ರಾಮಸ್ಥರ ಧೈರ್ಯ, ಸಹನೆ, ತಾಳ್ಮೆ ಅಗಾಧವಾದದ್ದು. ಗ್ರಾಮಸ್ಥರ ಸಹನೆ, ಸಹಕಾರದಿಂದಲೇ ಎಲ್ಲ ಕೆಲಸವಾಗಲು ಸಾಧ್ಯವಾಗಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಟಿನ್‌ ಶೆಡ್‌ ಗುತ್ತಿಗೆದಾರರು ತಿಂಗಳೊಳಗಾಗಿ ಎಲ್ಲ ಕೆಲಸ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಇದೇ ವೇಳೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ನಿರ್ಮಿಸುತ್ತಿರುವ ಒಂದು ಕೋಟಿ 50 ಲಕ್ಷ ರೂ. ಮೊತ್ತದ ವಸತಿಗೃಹ ನಿರ್ಮಾಣ ಕಾಮಗಾರಿಗಡ ಅಡಿಗಲ್ಲು ನೆರವೇರಿಸಲಾಯಿತು. ಲೋಕೋಪಯೋಗಿ ಎಇಇ ಸಿದ್ರಾಮ್‌ ದಂಡಗುಲಕರ್‌, ಗ್ರಾಪಂ ಉಪಾಧ್ಯಕ್ಷ ಜಿಸಾನ್‌ ಅಲಿ ಪಟ್ಟೇದಾರ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ದೇಸಾಯಿ, ಶರಣು ಕೋರವಾರ, ಚಂದ್ರು, ಬಡಗಾನ್‌, ಅಫಜಲ್‌ ಮಿಯ್ಯ, ಪ್ರಮುಖರಾದ ರೇವಣಸಿದ್ಧಪ್ಪ ಅರಣಕಲ್‌, ಜಾವೀದಮಿಯ್ಯ ಪಟ್ಟೇದಾರ, ಮೃತ್ಯುಂಜಯಸ್ವಾಮಿ, ಮಂಗಳಮೂರ್ತಿ, ವಿಶ್ವನಾಥ ಬಳಿ, ಧನಶೆಟ್ಟಿ ರೆಮ್ಮಣ್ಣಿ, ಗೌಸಪಟೇಲ್‌ ಇನಾಂದಾರ, ಪ್ರಭುಲಿಂಗ ಮಂತಾ, ಸಂತೋಷ ಬಳಿ ಮತ್ತಿತರರು ಇದ್ದರು. ಪ್ರಕಾಶ ರಂಗನೂರ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next