ಹೈದ್ರಾಬಾದ್ : ಸಾಯೋ ಕಾಲಕ್ಕೆ ಅದೇನ್ ಬಂತು ನಿನಗೆ ಅಂತಾರಲ್ಲ. ಅದಕ್ಕೆ ಸಾಕ್ಷಿಯಾಗಿ 85 ವರ್ಷ ಪ್ರಾಯದ ವೃದ್ಧನೊಬ್ಬ 6 ಮಂದಿ ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಪಾಲಾಗಿದ್ದಾನೆ.
ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿರುವ ಸತ್ಯನಾರಾಯಣ ಎಂಬ ವೃದ್ಧ ಪುಟ್ಟ ಬಾಲಕಿಯರನ್ನು ಚಾಕಲೇಟ್ ನೀಡಿ ಮನೆಗೆ ಕರೆಸಿಕೊಂಡು ವಿಕೃತಿ ಮೆರೆಯುತ್ತಿದ್ದ ಎಂದು ತಿಳಿದು ಬಂದಿದೆ.
ಕಳೆದ ಕೆಲವು ತಿಂಗಳಿನಿಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ಮಂದಿ ಬಾಲಕಿಯರು ನೀಡಿದ ದೂರಿನನ್ವಯ ಕುಶಾಯಿ ಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರ ಮೇಲೆ ರೇಪ್ ನಡೆದಿರುವುದು ತಿಳಿದು ಬಂದಿದ್ದು, ಇನ್ನಿಬ್ಬರ ಮೇಲೆ ರೇಪ್ ಮಾಡಲು ಯತ್ನ ಮಾಡಿದ್ದಾನೆ ಎಂದು ಹೇಳಲಾಗಿದೆ.
ಪೋಕ್‌ಸೋ ಕಾಯಿದೆ ಅಡ್ಡಿ ವಿವಿಧ ಪ್ರಕರಣಗಳನ್ನು ವೃದ್ಧನ ಮೇಲೆ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.