Advertisement
ವಿಶೇಷ ಜೈಲಿನ 45 ಹಾಗೂ ಕೇಂದ್ರ ಕಾರಾಗೃಹದ 40 ಕೈದಿಗಳನ್ನು ಶುಕ್ರವಾರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಎಲ್ಲರೂ ಹೆಚ್‍ಐವಿ ಪೀಡಿತರಾಗಿರುವುದು ಬೆಳಕಿಗೆ ಬಂದಿದೆ ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ನಾಥ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Related Articles
Advertisement
ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ?
ಇನ್ನು ಜೈಲುವಾಸಿಗಳಿಗೆ ಹೆಚ್‍ಐವಿ ಸೋಂಕು ಹರಡಲು ಡ್ರಗ್ಸ್ ತೆಗೆದುಕೊಳ್ಳಲು ಬಳಿಸಿದ ಸಿರಂಜಿ ಕಾರಣ ಎನ್ನುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೈಲಿನಲ್ಲಿ ಡ್ರಗ್ಸ್ ಬಂದಿದ್ದು ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಜೈಲುವಾಸಿಗಳಿಗೆ ಅಷ್ಟು ಸುಲಭವಾಗಿ ಡ್ರಗ್ಸ್ ದೊರೆಯಲು ಅಲ್ಲಿಯ ಅಧಿಕಾರಿಗಳ ಬೆಂಬಲ ಇದ್ದಿರಬಹುದು ಎಂದು ಹೇಳಲಾಗುತ್ತಿದೆ.