Advertisement

ಸಿಂಪ್ಲಿಲರ್ನ್ ಸಮೀಕ್ಷೆ: ಶೇ.85ಷ್ಟು ಮಂದಿ, ಬಡ್ತಿ, ಸಂಬಳ ಹೆಚ್ಚಳದ ಬಗ್ಗೆ ಆಶಾವಾದಿಗಳು!

09:24 PM May 30, 2024 | Team Udayavani |

ಬೆಂಗಳೂರು: ಡಿಜಿಟಲ್ ಕೌಶಲ್ಯಗಳಿಗಾಗಿ ವಿಶ್ವದ ಪ್ರಮುಖ ಆನ್ಲೈನ್ ಬೂಟ್ಕ್ಯಾಂಪ್ (ತರಬೇತು ಶಿಬಿರ) ಆಗಿರುವ ಸಿಂಪ್ಲಿಲರ್ನ್, ತನ್ನ 2024 ರ ಉನ್ನತ ಕೌಶಲ್ಯದ ಗ್ರಾಹಕ ಸಮೀಕ್ಷೆಯ ಪ್ರಮುಖ ಒಳನೋಟಗಳನ್ನು ಪ್ರಕಟಿಸಿದೆ.

Advertisement

ಶೇ. 97ರಷ್ಟು ಜನರು ಉತ್ತಮ ವೃತ್ತಿ ಅವಕಾಶ ದೊರೆಯಲು ಉನ್ನತ ಕೌಶಲ್ಯವೇ ಪ್ರಮುಖ ಎಂದಿದ್ದು, ಶೇ. 85ರಷ್ಟು ಜನರು ಬಡ್ತಿ, ವೃತ್ತಿಯ ಬದಲಾವಣೆ, ವೇತನ ಹೆಚ್ಚಳದ ಬಗ್ಗೆ ಆಶಾವಾದಿಗಳಾಗಿದ್ದಾರೆ.

ವಿವಿಧ ಕೈಗಾರಿಕೆಗಳು, ಭೌಗೋಳಿಕ ಸ್ಥಳಗಳು ಮತ್ತು ವೃತ್ತಿ ಹಂತಗಳ ವೃತ್ತಿಪರರಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2024ರ ಗ್ರಾಹಕ ಸಮೀಕ್ಷೆ ಕಲಿಯುವವರ ವರ್ತನೆಗಳಲ್ಲಿ ಆಗುತ್ತಿರುವಂತಹ ಗಮನಾರ್ಹ ಬದಲಾವಣೆಗಳನ್ನು ಬಹಿರಂಗಪಡಿಸಿದೆ. 2024 ರಲ್ಲಿ, 65% ವೃತ್ತಿಪರರು ಅರೆಕಾಲಿಕ ಅಥವಾ ಆನ್ಲೈನ್ ಪ್ರಮಾಣೀಕರಣಗಳಿಗೆ ಆದ್ಯತೆ ನೀಡಿದ್ದರೆ 2023 ರಲ್ಲಿ ಈ ಸಂಖ್ಯೆ 51% ಇತ್ತು.

ಸಿಂಪ್ಲಿಲರ್ನ್ 2024 ಗ್ರಾಹಕ ಸಮೀಕ್ಷೆ ವರದಿಯ ಕೆಲವು ಒಳನೋಟಗಳು:

  • ವೃತ್ತಿ ನಿರೀಕ್ಷೆಗಳು: ಪ್ರತಿಕ್ರಿಯಿಸಿದವರಲ್ಲಿ 85% ಮಂದಿ ಕ್ರಿಯಾಶೀಲ ಉದ್ಯೋಗ ಮಾರುಕಟ್ಟೆಯನ್ನು ಪ್ರತಿಬಿಂಬಿಸುವ ಕೌಶಲ್ಯ ಪಡೆದ ನಂತರ ಸಕ್ರಿಯವಾಗಿ ವೃತ್ತಿ ಬದಲಾವಣೆಗಳನ್ನು ಬಯಸುತ್ತಾರೆ.
  • ಅಪ್ಸ್ಕಿಲ್ಲಿಂಗ್ ಟ್ರೆಂಡ್ಗಳು: ಪ್ರತಿಸ್ಪಂದಿಸಿದವರಲ್ಲಿ 45% ಮಂದಿ ತಮ್ಮ ಕಂಪನಿ ಅಥವಾ ಅಪೇಕ್ಷಿತ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯದ ಬಗ್ಗೆ ಹೇಳುತ್ತಾರೆ.
  • ಆದ್ಯತೆಯ ಉನ್ನತ ಕೌಶಲ್ಯದ ವಿಧಾನಗಳು: ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವವರಲ್ಲಿ, 65% ರಷ್ಟು ಜನ ಅರೆಕಾಲಿಕ ಆನ್ಲೈನ್ ಕಾರ್ಯಕ್ರಮಗಳು ಅಥವಾ ಕೋರ್ಸ್ಗಳಿಗೆ ದಾಖಲಾಗಲು ಬಯಸುತ್ತಾರೆ, ಹೊಂದಿಕೊಳ್ಳುವ ಕಲಿಕೆಯ ಆಯ್ಕೆಗಳ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳುತ್ತಾರೆ.
  • ಉನ್ನತ ಡಿಜಿಟಲ್ ಆರ್ಥಿಕ ಕೌಶಲ್ಯಗಳು: ಡೇಟ ವಿಜ್ಞಾನ ಮತ್ತು ಬಿಸಿನೆಸ್ ಅನಲಿಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಪ್ರೋಗ್ರಾಂ ಮತ್ತು ಯೋಜನಾ ನಿರ್ವಹಣೆ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೆವ್ಆಪ್ಸ್, ಸೈಬರ್ ಭದ್ರತೆ, ಉತ್ಪನ್ನ ನಿರ್ವಹಣೆ ಮತ್ತು ಸಾಫ್ಟ್ ವೇರ್ ಅಭಿವೃದ್ಧಿ…. ಇವು, ಹೆಚ್ಚು ಬೇಡಿಕೆಯಿರುವ ಕೌಶಲ್ಯಗಳಾಗಿ ಹೊರಹೊಮ್ಮಿವೆ. ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿನ ಪರಿಣತಿಗಾಗಿ ಇರುವ ಬೇಡಿಕೆಯನ್ನು ಇದು ಎತ್ತಿ ತೋರುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next