Advertisement

ಸಿಆರ್‌ಪಿಎಫ್ ನಲ್ಲಿ 84,000 ಹುದ್ದೆಗಳು ಖಾಲಿ ಇವೆ: ಗೃಹ ಸಚಿವಾಲಯ

10:33 AM Jul 03, 2019 | Team Udayavani |

ಹೊಸದಿಲ್ಲಿ : ದೇಶದ ಅರೆಸೈನಿಕ ದಳ ಸಿಆರ್‌ಪಿಎಫ್ ನಲ್ಲಿ ಸುಮಾರು 84,000 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇಂದು ಲೋಕಸಭೆಗೆ ಲಿಖೀತ ಉತ್ತರದಲ್ಲಿ ತಿಳಿಸಿತು.

Advertisement

ಕೇಂದ್ರ ಮೀಸಲು ಪೊಲೀಸ್‌ ಪಡೆಗೆ ಮಂಜೂರಾಗಿರುವ ಸಿಬಂದಿ ಸಂಖ್ಯೆ 9,99,795. ವರ್ಷಂಪ್ರತಿ ಎಂಬಂತೆ ವಿವಿಧ ವರ್ಗಗಳಲ್ಲಿ ಶೇ.10ರಷ್ಟು ಹುದ್ದೆಗಳು ಖಾಲಿಯಾಗುತ್ತವೆ.

ಈ ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕೆ ಸೂಕ್ತವಾದ ನೀತಿ ನಿಯಮಗಳು ಇವೆ. ಪ್ರಕೃತ ಸಿಆರ್‌ಪಿಎಫ್ ನಲ್ಲಿ 84,037 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next