Advertisement

ಮನೆಗಳ್ಳನ ಬಂಧನ: 840 ಗ್ರಾಂ ಚಿನ್ನಾಭರಣ ಜಪ್ತಿ

12:45 PM Apr 02, 2022 | Team Udayavani |

ಬೀದರ: ನಗರದಲ್ಲಿ ವಿವಿಧ 15 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತನನ್ನು ಜಿಲ್ಲಾ ಪೊಲೀಸರು ಬಂಧಿಸಿ, ಆತನಿಂದ 42 ಲಕ್ಷ ರೂ. ಮೌಲ್ಯದ 840 ಗ್ರಾಂ. ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಹಿನ್ನೆಲೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಶುಕ್ರವಾರ ನಗರದ ಹೊರವಲಯದ ಚಿದ್ರಿ ರಿಂಗ್‌ ರಸ್ತೆ ಹತ್ತಿರ ಪೊಲೀಸರ ತಂಡ ಕರ್ತವ್ಯದಲ್ಲಿದ್ದಾಗ ಅನುಮಾನ್ಪದವಾಗಿ ಕಂಡು ಬಂದ ಮೈಲೂರಿನ ನಿವಾಸಿ ಫಿಯೊದ್ದೀನ್‌ ಶಾದುಲ್ಲಾ ಮಿರಾನಸಾಬ್‌ (55) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಗರದಲ್ಲಿ 15 ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿವೈಎಸ್‌ಪಿ ಕೆ.ಎಂ ಸತೀಶ, ಡಿಎಸ್‌ಪಿ ಬಲ್ಲಪ್ಪ ನಂದಗಾವಿ, ಗಾಂಧಿ ಗಂಜ್‌ ಠಾಣೆ ಪಿಐ ಜಿ.ಎಸ್‌ ಬಿರಾದಾರ, ಗ್ರಾಮೀಣ ವೃತ್ತ ಸಿಪಿಐ ಶ್ರೀಕಾಂತ ಅಲ್ಲಾಪೂರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಸೈಯದ್‌ ಪಟೇಲ್‌, ಎಎಸ್‌ಐ ಅಶೋಕ ಕೋಟೆ, ಸಿಬ್ಬಂದಿಗಳಾದ ನವೀನ್‌, ಅಶೋಕ, ನೀಲಕಂಠ, ರಾಜಕುಮಾರ ಚಿಕಬಸೆ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯ ಪ್ರಸಂಶನೀಯ ಎಂದು ಎಸ್‌ಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next