Advertisement

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

12:35 AM Nov 17, 2024 | Team Udayavani |

ನ್ಯೂಯಾರ್ಕ್‌: ಭಾರತದಿಂದ ಲೂಟಿ ಮಾಡಿದ್ದ 1,400 ಪ್ರಾಚೀನ ವಸ್ತುಗಳನ್ನು ಈಗ ಅಮೆರಿಕ ಮರಳಿ ನೀಡಿದೆ. ಈ ಪುರಾತನ ವಸ್ತು ಗಳು 84.40 ಕೋಟಿ ರೂ. (10 ದಶಲಕ್ಷ ಡಾಲರ್‌) ಮೌಲ್ಯದ್ದಾಗಿವೆ.

Advertisement

ಭಾರತದ ಕಾನ್ಸುಲೇಟ್‌ ಜನರಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೂತಾವಾಸ ಕಚೇರಿ ಅಧಿಕಾರಿ ಮನೀಶ್‌ ಕುಲ್ಹಾರಿಗೆ ಇವುಗಳನ್ನು ಹಸ್ತಾಂತರಿಸ ಲಾಗಿದೆ ಎಂದು ಮ್ಯಾನ್‌ಹ್ಯಾಟನ್‌ಜಿಲ್ಲಾ ಅಟಾರ್ನಿ ಅಲ್ವಿನ್‌ ಎಲ್‌.ಬ್ರ್ಯಾಗ್‌ ಜ್ಯೂ ಹೇಳಿದ್ದಾರೆ.

ಅಮೆರಿಕ ಹಸ್ತಾಂತರಿಸಿದ ಪುರಾತನ ವಸ್ತು ಗಳಲ್ಲಿ 1960ರ ದಶಕದಲ್ಲಿ ರಾಜಸ್ಥಾನದಿಂದ ಹೊತ್ತೂ ಯ್ದಿದ್ದ ಥಾನೆಸರ್‌ ಮಾತೃ ಮೂರ್ತಿ ಹಾಗೂ 1980ರ ದಶಕದಲ್ಲಿ ಮಧ್ಯಪ್ರದೇಶದ ದೇವಾ ಲಯದಿಂದ ಲೂಟಿ ಮಾಡಿದ್ದ ನೃತ್ಯಗಾರ್ತಿಯ ಮರಳಿನ ಶಿಲ್ಪವೂ ಸೇರಿವೆ. ಮಧ್ಯಪ್ರದೇಶದಿಂದ ಹೊತ್ತೂಯ್ದಿದ್ದ ಮರಳಿನ ಶಿಲ್ಪವನ್ನು ಅಕ್ರಮವಾಗಿ ಸಾಗಿಸಲು ಅನುಕೂಲವಾಗುವಂತೆ 2 ತುಂಡು ಮಾಡಿದ್ದ ಲೂಟಿಕೋರರು ಅದನ್ನು ಲಂಡನ್‌ಗೆ ಹೊತ್ತೂಯ್ದಿದ್ದರು. ಬಳಿಕ 1992ರಲ್ಲಿ ಲಂಡನ್‌ನಿಂದ ನ್ಯೂಯಾರ್ಕ್‌ಗೆ ಕೊಂಡೊಯ್ಯಲಾಗಿತ್ತು. ಬಳಿಕ ಅದನ್ನು ಮರುಜೋಡಣೆ ಮಾಡಿ ಮೆಟ್ರೋಪಾಲಿಟನ್‌ ಮ್ಯೂಸಿಯಮ್‌ ಆಫ್ ಆರ್ಟ್‌ಗೆ ದಾನ ನೀಡಲಾಗಿತ್ತು. 2023ರಲ್ಲಿ ಪುರಾತನ ವಸ್ತುಗಳ ಸಾಗಣೆ ಘಟಕ (ಎಟಿಯು) ಇದನ್ನು ವಶಕ್ಕೆ ಪಡೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next