Advertisement
ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಅಂತ ತುಂಬಾ ಆಸೆ ಇದೆ. ಬ್ಯಾಂಕ್ ಕೆಲಸ ಆಗಿಬಿಟ್ರೆ ಲೈಫ್ ಲಾಂಗ್ ಬದುಕಿಗೆ ಭದ್ರತೆ ಸಿಗುತ್ತೆ. ಆದ್ರೆ ಎಷ್ಟು ಪರೀಕ್ಷೆ ಬರೆದ್ರೂ ಕೆಲಸವೇ ಸಿಗುತ್ತಿಲ್ಲ ಎಂದು ಜನ ಸಂಖ್ಯೆಯಲ್ಲಿ ಇದ್ದಾರೆ. ಇಷ್ಟಾದರೂ ಛಲ ಬಿಡದೆ ಮತ್ತೆ ಮತ್ತೆ ಪರೀಕ್ಷೆಗೆ ಸಿದ್ಧರಾಗುವ ಅಭ್ಯರ್ಥಿಗಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೂಂದು ಅವಕಾಶ ಒದಗಿಸಿದೆ.
ಕ್ಲರ್ಕ್ ಹುದ್ದೆಗೆ ಒಟ್ಟು 8,301 ಹುದ್ದೆಗಳಿವೆ. ಅದರಲ್ಲಿ 7,200 ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಇನ್ನುಳಿದ 1,101 ಹುದ್ದೆಗಳನ್ನು ಹಿಂದುಳಿದವರಿಗೆ ಮೀಸಲಿಡಲಾಗಿದೆ. ಅಲ್ಲದೆ ಒಟ್ಟು ಹುದ್ದೆಗಳನ್ನು ರಾಜ್ಯವಾರು ವಿಂಗಡನೆ ಮಾಡಲಾಗಿದೆ. ಅದರಂತೆ ಕರ್ನಾಟಕದ ಪಾಲಿಗೆ 345 ಹುದ್ದೆಗಳಿವೆ. ಅದರಲ್ಲಿ ಸಾಮಾನ್ಯ ಹುದ್ದೆಗಳು 100 ಮತ್ತು ಹಿಂದುಳಿದವರಿಗೆ 245 ಹುದ್ದೆಗಳನ್ನು ಮೀಸಲಿಡಲಾಗಿದೆ.
Related Articles
ಅಭ್ಯರ್ಥಿಗಳು ಜ.1ಕ್ಕೆ ಅನುಗುಣವಾಗಿ 20ರಿಂದ 28ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟರಿಗೆ ವಯೋಮಿತಿಯಲ್ಲಿ 5ವರ್ಷ ಸಡಿಲಿಕೆಯಿದೆ.ಅಲ್ಲದೆ ಪಿಡಬ್ಲೂಡಿಗೆ 10-15 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಆಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮನಾದ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ಎಸ್‌ಬಿಐನ ಸಹಾಯಕ ಹುದ್ದೆಗೆ 11,765ರಿಂದ 31,450 ರೂ. ವೇತನವನ್ನು ನಿಗದಿ ಮಾಡಲಾಗಿದೆ.
Advertisement
ಆಯ್ಕೆ ಹೇಗಿರುತ್ತೆ?ಕ್ಲರ್ಕ್ ಹುದ್ದೆಗೆ ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಎರಡು ರೀತಿಯ ಪರೀಕ್ಷೆಗಳಿವೆ. ಒಂದು ಪ್ರಾಥಮಿಕ ಪರೀಕ್ಷೆ ಮತ್ತೂಂದು ಮುಖ್ಯಪರೀಕ್ಷೆ. ಪ್ರಾಥಮಿಕ ಪರೀಕ್ಷೆಯಲ್ಲಿ ಅರ್ಹರಾದವರಿಗೆ ಮಾತ್ರ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಪ್ರಾಥಮಿಕ ಪರೀಕ್ಷೆಗೆ ನೂರು ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, ಒಂದು ಗಂಟೆ ಕಾಲಮಿತಿಯಿರುತ್ತದೆ. ಇಂಗ್ಲಿಷ್ ಭಾಷೆ 30 ಪ್ರಶ್ನೆಗಳು-30 ಅಂಕ, ನ್ಯೂಮರಿಕಲ್ ಎಬಿಲಿಟಿ-35 ಪ್ರಶ್ನೆಗಳು- 35 ಅಂಕ, ರೀಸನಿಂಗ್ ಎಬಿಲಿಟಿ-35 ಪ್ರಶ್ನೆಗಳು-35 ಅಂಕಗಳಿರುತ್ತವೆ. ಒಟ್ಟು ನೂರು ಅಂಕಗಳಿಗೆ ಉತ್ತರಿಸಬೇಕಾಗುತ್ತದೆ. ಮುಖ್ಯ ಪರೀಕ್ಷೆಗೆ 2ಗಂಟೆ 40 ನಿಮಿಷದ ಕಾಲಮಿತಿಯಿದ್ದು, ಋಣಾತ್ಮಕ 4/1 ಅಂಕಗಳು ಇರಲಿವೆ. ಸಾಮಾನ್ಯ ಮತ್ತು ಆರ್ಥಿಕ ಜ್ಞಾನ-50 ಪ್ರಶ್ನೆಗಳು-50 ಅಂಕ, ಸಾಮಾನ್ಯ ಇಂಗ್ಲಿಷ್ 40 ಪ್ರಶ್ನೆಗಳು- 40 ಅಂಕ, ಕ್ಯಾಂಟಿಟೇಟೀವ್ ಆಪ್ಟಿಟ್ಯೂಡ್- 50 ಪ್ರಶ್ನೆಗಳು- 50 ಅಂಕ, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್- 50 ಪ್ರಶ್ನೆಗಳು- 50 ಅಂಕ, ಒಟ್ಟು 190 ಅಂಕಗಳಿಗೆ ಉತ್ತರಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆ ಮಾಡುವ ಮುನ್ನ ಅಗತ್ಯ ಪೂರಕ ದಾಖಲೆಗಳ ಸಾಫ್ಟ್ ಕಾಪಿಯನ್ನು ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸಲು ಮೊದಲು //ibps.sifyitest.com/sbijacsjan18/ ಇಲ್ಲಿ ರಿಜಿಸ್ಟರ್ ಆಗಬೇಕು. ಬಳಿಕ ನೀವು ಸೇರಲಿರುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ, ದಾಖಲೆಗಳನ್ನು ತುಂಬಿ, ಅರ್ಜಿ ಫೀಸನ್ನು ( ಸಾಮಾನ್ಯರಿಗೆ- 600 ರೂ, ಪರಿಶಿಷ್ಟರಿಗೆ- 100 ರೂ.) ಪಾವತಿಸಬೇಕು. ಅರ್ಜಿ ಹಾಕಲು ಫೆ.10 ಕೊನೆದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://www.sbi.co.in/webfiles/uploads/files/1516358303086_SBI_CLERICAL_ADV_ENGLISH.pdf ಅನಂತನಾಗ್ ಎನ್.