Advertisement

South Korea ಉದ್ಯಮಿಯಿಂದ ಪತ್ನಿಗೆ 8300 ಕೋಟಿ ಪರಿಹಾರ

12:22 AM Jun 01, 2024 | Team Udayavani |

ಸಿಯೋಲ್‌: ಮಾಜಿ ಪತ್ನಿಗೆ ಬರೋಬ್ಬರಿ 8,300 ಕೋಟಿ ರೂ. ಜೀವನಾಂಶ ನೀಡುವಂತೆ ಉದ್ಯಮಿಯೊಬ್ಬರಿಗೆ ದಕ್ಷಿಣ ಕೊರಿಯಾದ ನ್ಯಾಯಾಲಯವೊಂದು ಆದೇಶಿಸಿದೆ. ಇದು ದಕ್ಷಿಣ ಕೊರಿಯಾದಲ್ಲೇ ಅತೀ ಹೆಚ್ಚಿನ ಮೊತ್ತದ ಜೀವನಾಂಶ ಪಾವತಿಯಾಗಿದೆ. ಎಸ್‌ಕೆ ಗ್ರೂಪ್‌ನ ಉದ್ಯಮಿ ಚೇ ತಾವೋಂಗ್‌ಗೆ ಬೃಹತ್‌ ಪ್ರಮಾಣದ ಜೀವನಾಂಶ ನೀಡಲು ಕೋರ್ಟ್‌ ಆದೇಶಿಸಿದೆ. ತಾವೋಂಗ್‌ ಒಡೆತನ ಕಂಪೆನಿ ದಂಪತಿಗಳಿಬ್ಬರಿಗೂ ಸೇರಿದ್ದಾಗಿದ್ದು, ವಿಚ್ಛೇದನದ ಬಳಿಕ ಪಾಲು ನೀಡುವುದು ನ್ಯಾಯವಾಗಿದೆ ಎಂದು ಸಿಯೋಲ್‌ನ ಹೈಕೋರ್ಟ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next