Advertisement

“83′ವಿಶ್ವಕಪ್‌ ಚಿತ್ರ: ಕಪಿಲ್‌ ಕುತೂಹಲ

09:57 AM Jan 06, 2020 | Team Udayavani |

ಮುಂಬಯಿ: ಭಾರತದ 1983ರ ವಿಶ್ವಕಪ್‌ ಕ್ರಿಕೆಟ್‌ ಗೆಲುವು ಈಗ ಚಿತ್ರವಾಗುತ್ತಿದ್ದು, ಇದನ್ನು ಅಂದಿನ ನಾಯಕ ಕಪಿಲ್‌ದೇವ್‌ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ತಾನೊಬ್ಬನೇ ಕೇಂದ್ರಬಿಂದು ಆಗಿರುವುದನ್ನು ಬಯಸಲಾರೆ, ಇದೊಂದು ತಂಡ ಪ್ರಯತ್ನ ಎಂಬುದಾಗಿ ಕಪಿಲ್‌ ಹೇಳಿದರು.

Advertisement

“ನಾನು ಆ ತಂಡದ ನಾಯಕ ಹಾಗೂ ತಂಡದ ಓರ್ವ ಸದಸ್ಯನಾಗಿದ್ದೆ. ಎಲ್ಲರೂ 100 ಪ್ರತಿಶತ ನಿರ್ವಹಣೆ ನೀಡಿದ್ದರಿಂದ ಭಾರತ ಚಾಂಪಿಯನ್‌ ಆಯಿತು. ಹೀಗಾಗಿ ಚಿತ್ರದಲ್ಲಿ ನನ್ನ ಪಾತ್ರದ ನಿರ್ವಹಣೆಯನ್ನಷ್ಟೇ ಗಮನಿಸಲಾರೆ’ ಎಂದು ಕಪಿಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next