Advertisement

81 ವರ್ಷದ ಶ್ರೀಲಂಕಾ ಅಜ್ಜನಕೆನ್ನೆಗೆ ಮುತ್ತಿಟ್ಟ ವಿರಾಟ್‌ ಕೊಹ್ಲಿ!

07:30 AM Jul 31, 2017 | Team Udayavani |

ಗಾಲೆ: ಪರ್ಸಿ ಅಭಯಶೇಖರ ಯಾನೆ “ಪರ್ಸಿ ಅಂಕಲ್‌’! ಶ್ರೀಲಂಕಾ ಕ್ರಿಕೆಟಿನ ಬಹು ದೊಡ್ಡ ಅಭಿಮಾನಿ. ಭಾರತದಲ್ಲಿ ಸುಧೀರ್‌ ಕುಮಾರ್‌ ಚೌಧರಿ ಇದ್ದಂತೆ, ಪಾಕಿಸ್ತಾನದಲ್ಲಿ ಚೌಧರಿ ಅಬ್ದುಲ್‌ ಜಲೀಲ್‌ (ಕಾಕಾ) ಇದ್ದಂತೆ ಲಂಕಾದಲ್ಲಿ ಪರ್ಸಿ ಅಭಯಶೇಖರ. ಆದರೆ ಇವರೆಲ್ಲರಿಗಿಂತ ಅಭಯಶೇಖರ ಹಿರಿಯರು. 

Advertisement

ಲಂಕಾ ತಂಡ ಎಲ್ಲೇ ಕ್ರಿಕೆಟ್‌ ಆಡುತ್ತಿರಲಿ ದೇಶದ ಧ್ವಜ ಹಿಡಿದು ಆಭಯ ಶೇಖರ ಹಾಜರ್‌. ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ ಪಂದ್ಯದಲ್ಲೂ ಅವರು ತವರಿನ ತಂಡವನ್ನು ಹುರಿದುಂಬಿಸುತ್ತಿದ್ದರು. ಆದರೆ ಇಲ್ಲಿ ಲಂಕಾ ತಂಡ ಭಾರೀ ಅಂತರದಿಂದ ಸೋಲುವುದನ್ನು ಅವರು ಕಾಣಬೇಕಾಯಿತು.
ಈ ನೋವಿನ ನಡುವೆಯೂ ಅವರಿಗೆ ಭಾರತದ ಕಡೆಯಿಂದ ಜನ್ಮದಿನದ ವಿಶಿಷ್ಟ ಉಡು ಗೊರೆಯೊಂದು ಒಂದು ದಿನ ಮುಂಚಿತವಾಗಿ ಸಿಕ್ಕಿದೆ. ಗಾಲೆ ಟೆಸ್ಟ್‌ ಪಂದ್ಯದ ಪ್ರಶಸ್ತಿ ವಿತರಣಾ ಸಮಾರಂಭಕ್ಕೂ ಮೊದಲು ನಾಯಕ ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಸ್ಟೇಡಿಯಂನಲ್ಲಿ ಹಾಜರಿದ್ದ ಅಭಯಶೇಖರ ಬಳಿ ತೆರಳಿದ್ದಾರೆ. “ಹ್ಯಾಪಿ ಬರ್ತ್‌ಡೇ ಪರ್ಸಿ ಅಂಕಲ್‌’ ಎನ್ನುತ್ತ ಅವರ ಕೆನ್ನೆಗೆ ಕೊಹ್ಲಿ ಮುತ್ತೂಂದನ್ನು ನೀಡಿದ್ದಾರೆ. ಅಚ್ಚರಿ ಹಾಗೂ ಆನಂದದಲ್ಲಿ ತೇಲಾಡಿದ ಅಭಯಶೇಖರ, ಪ್ರತಿಯಾಗಿ ಕೊಹ್ಲಿಯ ಎರಡೂ ಕೆನ್ನೆಗಳಿಗೆ ಮುತ್ತನ್ನಿತ್ತಿದ್ದಾರೆ. ಅಂದ ಹಾಗೆ, ಭಾನುವಾರ ಪರ್ಸಿ ಅಭಯಶೇಖರ 81ರ ಹರೆಯಕ್ಕೆ ಕಾಲಿರಿಸಿದರು! “ಕೊಹ್ಲಿ ನನಗೆ ಮುತ್ತು ನೀಡುವಾಗ ಸುತ್ತಲೂ ಇದ್ದ ವೀಕ್ಷಕರು ನಗತೊಡಗಿದರು. ನನಗೆ 81 ವರ್ಷ ಆಯಿತು ಎಂಬುದನ್ನು ಕೊಹ್ಲಿಗೆ ನಂಬಲಾಗಲಿಲ್ಲ ಎಂದು ತಿಳಿಸಿದರು. 

2015ರ ನೆನಪುಗಳ ಬಿಚ್ಚಿಟ್ಟ ಪರ್ಸಿ
ಕಳೆದ ಸಲ ಭಾರತ ತಂಡದೊಂದಿಗೆ ಬೆರೆತ ಕ್ಷಣವನ್ನೂ ಅಭಯಶೇಖರ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. “2015ರಲ್ಲಿ ಭಾರತ ತಂಡ ಇಲ್ಲಿಗೆ ಬಂದಾಗ ಭಾರೀ ಮಳೆ ಇತ್ತು. ಇಂಥ ಒಂದು ಮಳೆ ಬಿಡುವಿನ ವೇಳೆ ಕೊಹ್ಲಿ ಮತ್ತು ರೋಹಿತ್‌ ಶರ್ಮ ನನ್ನನ್ನು ಅವರ ಡ್ರೆಸ್ಸಿಂಗ್‌ ರೂಮ್‌ಗೆ
ಆಹ್ವಾನಿಸಿದ್ದರು. ಅಲ್ಲಿ ಸಾಕಷ್ಟು ತಮಾಷೆ ಮಾಡಿದೆವು. ಆದರೆ ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳದ ಸದಸ್ಯರು ನನಗೆ ಡ್ರೆಸ್ಸಿಂಗ್‌ ರೂಮ್‌ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಎರಡೂ ಕ್ರಿಕೆಟ್‌ ಮಂಡಳಿಗಳ ಕಾರ್ಯದರ್ಶಿಗಳು ನಡುವೆ ಪ್ರವೇಶಿಸಿದ ಬಳಿಕ ಅನುಮತಿ ಲಭಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next