Advertisement
ಇಲ್ಲಿನ ಹಳೇ ಸಿ. ಆರ್. ಮೈದಾನದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಎಲ್ಲೆಲ್ಲಿ ಅನುಕೂಲತೆ ಇದೆಯೋ ಅಲ್ಲಿಯ ಎಲ್ಲ ಕೆರೆಗಳನ್ನು ತುಂಬಿಸಲಾಗಿದ್ದು ಎಲ್ಲಿಯೂ ಸಹ ಟ್ಯಾಂಕರ್ ಮೂಲಕ ನೀರನ್ನು ಸದ್ಯಕ್ಕೆ ಪೂರೈಕೆ ಮಾಡುತ್ತಿಲ್ಲ ಎಂದರು.
Related Articles
Advertisement
ಬೆಳೆ ವಿಮೆ ಪರಿಹಾರ ನಿಟ್ಟಿನಲ್ಲಿ ಬರ ಅಥವಾ ಅತಿವೃಷ್ಟಿ ಸಂದರ್ಭದಲ್ಲಿ ತಕ್ಷಣಕ್ಕೆ ಶೇಕಡ 25 ರಷ್ಟು ಮಧ್ಯಂತರ ಪರಿಹಾರವನ್ನು ನೀಡಬೇಕೆಂಬ ನಿಯಮ ಇರುವುದು ನಿಜ ವಿಮಾ ಕಂಪನಿ ಈ ಬಗ್ಗೆ ಈ ಬಗ್ಗೆ ಒಪ್ಪಿರಲಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ವಿಮಾ ಕಂಪನಿಯವರೊಂದಿಗೆ ಸಭೆ ನಡೆಸಿ ಒತ್ತಾಯ ಮಾಡಿದ್ದರಿಂದ ವಿಮಾ ಕಂಪನಿಯವರು ಶೇಕಡ 25ರಷ್ಟು ಮಧ್ಯಂತರ ಪರಿಹಾರ ನೀಡಲು ಒಪ್ಪಿದ್ದು ಇನ್ನೊಂದು ವಾರದಲ್ಲಿ ಮಧ್ಯಂತರ ಪರಿಹಾರ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.
ಬರಗಾಲ ಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡ ವೀಕ್ಷಿಸಿದ್ದು ನರೇಗಾ ಅಡಿಯಲ್ಲಿ 150 ದಿನಗಳ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.