Advertisement
ಗುರುವಾರದಿಂದ ಒಟ್ಟು 5 ದಿನಗಳ ಕಾಲ ಆ್ಯತ್ಲೆಟಿಕ್ಸ್ ಸ್ಪರ್ಧೆ ನಡೆಯಲಿದ್ದು, ದೇಶದ ವಿವಿ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯವನ್ನು ಪಣಕ್ಕಿಡಲಿದ್ದಾರೆ.
ದೇಶದ ವಿವಿಧೆಡೆಯ 400 ವಿವಿಗಳ ಸುಮಾರು 5 ಸಾವಿರದಷ್ಟು ಆತ್ಲೀಟ್‌ಗಳು ಕಳೆದ 2-3 ದಿನಗಳಿಂದ ಸ್ವರಾಜ್ಯ ಮೈದಾನದಲ್ಲಿ ಅಂತಿಮ ಅಭ್ಯಾಸ ನಡೆಸುತ್ತಿದ್ದಾರೆ. ನವೀಕೃತ ಸಿಂಥೆಟಿಕ್ ಟ್ರ್ಯಾಕ್
ಸ್ವರಾಜ್ಯ ಮೈದಾನದ ಕ್ರೀಡಾ ಇಲಾಖೆಯ ಸಿಂಥೆಟಿಕ್ ಟ್ರಾÂಕ್ ನವೀಕರಣಗೊಂಡು ಹೊಸ ಬಣ್ಣ ಲೇಪಿಸಿಕೊಂಡಿದೆ. ಗುರುವಾರ ಅಪರಾಹ್ನ ಹನುಮಂತ ದೇವಸ್ಥಾನದ ಬಳಿಯಿಂದ ಸಾಂಸ್ಕೃತಿಕ ಮೆರವಣಿಗೆ ಹೊರಡಲಿದೆ. ಆಳ್ವಾಸ್‌ನ 2 ಸಾವಿರ ವಿದ್ಯಾರ್ಥಿಗಳು ದೇಶದ ವೈವಿಧ್ಯಮಯ ಉಡುಪು ಧರಿಸಿ ರಂಗೇರಿಸಲಿದ್ದಾರೆ. ಸುಮಾರು 5 ಸಾವಿರ ಮಂದಿ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಒಟ್ಟು 10 ಸಾವಿರ ಮಂದಿ ಪಥಸಂಚಲನದಲ್ಲಿ ಜನಮನ ಸೂರೆಗೊಳ್ಳಲಿದ್ದಾರೆ.
Related Articles
Advertisement
ಹೊನಲು ಬೆಳಕಿನ ಕ್ರೀಡಾಕೂಟಇದು ಹೊನಲು ಬೆಳಕಿನ ಕ್ರೀಡಾಕೂಟವಾಗಿರುವುದೊಂದು ವಿಶೇಷ. ವಿದ್ಯುದ್ದೀಪಾಲಂಕಾದೊಂದಿಗೆ ಬಣ್ಣಬಣ್ಣದ ಆಕಾಶಬುಟ್ಟಿಗಳು ಈಗಾಗಲೇ ಮಿಂಚಲಾರಂಭಿಸಿವೆ. ವಿವಿಧ ಕ್ರೀಡಾ ಸಲಕರಣೆ, ಉಡುಪು, ಆಹಾರ, ಲಘು ಪಾನೀಯದ ಮಳಿಗೆಗಳು ಸಿದ್ಧಗೊಂಡಿವೆ. ಈ ಬೃಹತ್ ಕ್ರೀಡಾಜಾತ್ರೆಯಲ್ಲಿ ಅದೆಷ್ಟು ದಾಖಲೆಗಳು ನಿರ್ಮಾಣವಾದಾವು ಎಂಬುದೊಂದು ಕುತೂಹಲ. ಅಖೀಲ ಭಾರತ ವಿ.ವಿ.ಗಳ ಒಕ್ಕೂಟದ ಸಹಭಾಗಿತ್ವದಲ್ಲಿ ರಾಜೀವ್ ಗಾಂಧಿ ಆರೋಗ್ಯವಿ.ವಿ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಘಟಿಸಿರುವ ಈ ಕೂಟದ ಯಶಸ್ಸಿಗಾಗಿ ಆಳ್ವಾಸ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಆಹಾರ, ಸಾರಿಗೆ, ತಾಂತ್ರಿಕ, ಬಹುಮಾನ ವಿತರಣೆ, ದಾಖಲೀಕರಣ ಸೇರಿದಂತೆ ಸುಮಾರು 20 ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.