Advertisement
ಕಳೆದ ವಾರವಷ್ಟೇ ಭಾರತ ಮತ್ತು ಪಾಕ್ ನಡುವೆ ಕರ್ತಾರ್ಪುರ ಕಾರಿಡಾರ್‌ಗೆ ಸಂಬಂಧಿಸಿದ ಒಪ್ಪಂದ ನಡೆದಿದೆ. ಕರ್ತಾರ್ಪುರದಲ್ಲಿನ ಗುರುದ್ವಾರ ದರ್ಬಾರ್ ಸಾಹಿಬ್‌ಗ ಪ್ರತಿ ದಿನ 5 ಸಾವಿರ ಭಾರತೀಯ ಯಾತ್ರಿಕರಿಗೆ ಆಗಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ಯಾತ್ರಿಕರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು 80 ವಲಸೆ ಕೌಂಟರ್‌ಗಳನ್ನು ಹಾಗೂ ದರ್ಬಾರ್ ಸಾಹಿಬ್‌ನಿಂದ 4 ಕಿ.ಮೀ. ದೂರದಲ್ಲಿ ವಲಸೆ ಹಾಲ್‌ವೊಂದನ್ನು ತೆರೆಯಲು ನಿರ್ಧರಿಸಲಾಗಿದೆ.
ಭಾರತದ ಸಿಖ್ ಭಕ್ತರ ಒಂದು ಸಮೂಹವು ಸೋಮವಾರವೇ ನವದೆಹಲಿಯಿಂದ ಪಾಕ್‌ನ ನನ್‌ಕಾನಾ ಸಾಹಿಬ್‌ಗ ಧಾರ್ಮಿಕ ಮೆರವಣಿಗೆ ಆರಂಭಿಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು, ಈ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಕ್‌ನ ಪ್ರಭಾರ ಹೈಕಮಿಷನರ್ ಸೈಯದ್ ಹೈದರ್ ಶಾ ಪಾಲ್ಗೊಂಡಿದ್ದರು. ನಗರ ಕೀರ್ತನೆಯು ಲೂಧಿಯಾನಾ ಮತ್ತು ಅಮೃತಸರ ದಾಟಿ, ಅ.31ರಂದು ವಾಘಾ ಗಡಿ ಮೂಲಕ ಪಾಕಿಸ್ತಾನ ತಲುಪಲಿದೆ.