Advertisement

ವಯರ್‌ಮನ್‌ ನಿರ್ಲಕ್ಷ್ಯ: ವಿದ್ಯುದಾಘಾತಕ್ಕೆ ಬಾಲಕಿ ಸಾವು

12:18 PM Apr 03, 2018 | Team Udayavani |

ಥಾಣೆ : ವಿದ್ಯುತ್‌ ಇಲಾಖೆಯ ವಯರ್‌ಮನ್‌ ನಿರ್ಲಕ್ಷ್ಯದ ಪರಿಣಾಮವಾಗಿ ಇಲ್ಲಿನ ಸಹಕಾರಿ ವಸತಿ ಕಟ್ಟದ ಕಬ್ಬಿಣದ ಮೆಟ್ಟಲುಗಳಲ್ಲಿ ವಿದ್ಯುತ್‌ ಹರಿದ ಪರಿಣಾಮವಾಗಿ ಎಂಟು ವರ್ಷದ ಬಾಲಕಿಯೋರ್ವಳು ಮೆಟ್ಟಲ ಮೇಲೆ ಕಾಲಿರಿಸುತ್ತಲೇ ಸುಟ್ಟು ಕರಕಲಾದ ದಾರುಣ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಲೋಕಮಾನ್ಯ ನಗರ ಪ್ರದೇಶದಲ್ಲಿರುವ ಈ ಸಹಕಾರಿ ವಸತಿ ಕಟ್ಟಡದ ಕಬ್ಬಿಣದ ಮಟ್ಟಲುಗಳ ದುರಸ್ತಿ ಕಾರ್ಯಕ್ಕೆಂದು ಬಂದಿದ್ದ ವಿದ್ಯುತ್‌ ಇಲಾಖೆಯ ವಯರ್‌ಮನ್‌ ನಿರ್ಲಕ್ಷ್ಯದಿಂದ ಸಜೀವ ತಂತಿಯೊಂದನ್ನು ಅಂತೆಯೇ ಬಿಟ್ಟು ಹೋಗಿದ್ದ. 

ಪರಿಣಾಮವಾಗಿ ತನ್ನ ಮನೆಗೆ ಹೋಗಲು ಮೆಟ್ಟಲೇರಿದ 8ರ ಹರೆಯದ ಸಿದ್ಧಿ ಗುಪ್ತಾ ಒಡನೆಯೇ ಸುಟ್ಟು ಕರಕಲಾದಳು. 

ವರ್ತಕ ನಗರ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ತೋರಿದ ವಯರ್‌ಮನ್‌ ವಿರುದ್ಧ  ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ತನಕ ಬಂಧನ ನಡೆಸಿಲ್ಲ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next