Advertisement

ವಿಜಯಪುರ:ಸೇತುವೆ ಅಡಿ  8 ವಿವಿಪ್ಯಾಟ್‌ ಯಂತ್ರಗಳು ಪತ್ತೆ! 

05:20 PM May 20, 2018 | |

ಬಸವನಬಾಗೇವಾಡಿ: ಇಲ್ಲಿನ ಮನುಗೂಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸೇತುವೆಯೊಂದರ ಬಳಿ 8 ವಿವಿಪ್ಯಾಟ್‌ ಯಂತ್ರಗಳು ಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ. 

Advertisement

8 ಮತ ಖಾತ್ರಿ ಯಂತ್ರಗಳು, ಕವರ್‌ಗಳು  ಪತ್ತೆ ಯಾಗಿದ್ದು ಅವುಗಳಲ್ಲಿ ಪೇಪರ್‌ಗಳು ಇಲ್ಲ ಎಂದು ತಿಳಿದು ಬಂದಿದೆ. 

ಶೆಡ್‌ನ‌ಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಯಂತ್ರಗಳು ಸಿಕ್ಕಿದ್ದು ,ಅವುಗಳನ್ನು ಸಂಗ್ರಹಿಸಿಟ್ಟಿದ್ದು ಕಾಂಗ್ರೆಸ್‌ ಮುಖಂಡರು ಸೇರಿದಂತೆ ಹಲವರು ಆಗಮಿಸಿ ಪರಿಶೀಲನೆ ನಡೆಸಿದ್ದು  ಚುನಾವಣೆಯಲ್ಲಿ ಗೋಲ್‌ ಮಾಲ್‌ ಆಗಿದೆ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ. 

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಅವರ ಸ್ಪಷ್ಟನೆಗಾಗಿ ಎದುರು ನೋಡಲಾಗುತ್ತಿದೆ. ಪ್ರಕರಣ ದಾಖಲಾಗಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next