ಗುಂಡ್ಲುಪೇಟೆ: ಪಟ್ಟಣದ ಊಟಿ ಸರ್ಕಲ್ ಬಳಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಕೆಆರ್‌ಡಿಸಿಎಲ್ ಮತ್ತು ಆರ್ ಐಡಿಎಫ್ ಯೋಜನೆಯಡಿ 27.6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾ ಣವಾದ ನೂತನ ಪಶು ಆಸ್ಪತ್ರೆ ಕಚೇರಿ ಕಟ್ಟಡವನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ಉದ್ಘಾಟಿಸಿದರು.
ಪಶು ಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಎಸ್.ಸಿ.ಸುರೇಶ್ ಮಾತನಾಡಿ, ತಾಲೂಕಿಗೆ 8 ಪಶು ಪಾಲನೆ ಆಸ್ಪತ್ರೆಗಳು ಮಂಜೂರಾಗಿದ್ದವು. ಅದರಲ್ಲಿ ತೆಕರಣಾಂಬಿ, ಮಳ್ಳವಳ್ಳಿ ಹೊರತು ಪಡಿಸಿ ಉಳಿದ ಎಲ್ಲಾ ಕಡೆ ಕಟ್ಟಡ ನಿರ್ಮಾಣವಾಗಿದೆ. ಜಿಲ್ಲೆಗೆ ಮಂಜೂರಾಗಿದ್ದ ಗೋಶಾಲೆಯನ್ನು ಬರಗಿಯಲ್ಲಿ ಆರಂಭಿಸಲು ನಿರ್ಧರಿ ಸಲಾಗಿದೆ. ಜೊತೆಗೆ ಬರಗಿ ಫಾರಂನಲ್ಲೆ ಡಿಪ್ಲೊಮಾ ತರಗತಿ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2600 ಕಿಸಾನ್ ಕಾರ್ಡ್ ನೋಂದಣಿ ಮಾಡಲಾಗಿದೆ. ಇದರಲ್ಲಿ ಗುಂಡ್ಲು ಪೇಟೆ ತಾಲೂಕಿನವರೇ 1000 ಸಾವಿರ ಮಂದಿ ನೋಂದಣಿಯಾಗಿದ್ದು, 600 ಮಂದಿ ಫಲಾನುಭವಿಗಳಿಗೆ ಬ್ಯಾಂಕ್ ಮೂಲಕ ಮೂರು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ದೊರಕಲಿದೆ ಎಂದರು.
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪಶು ವೈದ್ಯ ಇಲಾಖೆಯಲ್ಲಿ ಹಲವು ಯೋಜನೆ ಗಳನ್ನು ಅನುಷ್ಠಾನ ಗೊಳಿಸಿದೆ. ಹೈನುಗಾರಿಕೆ ಉತ್ತೇಜನ ನೀಡಲು ಹಾಗೂ ಕುರಿ, ಮೇಕೆ, ಕೋಳಿ, ಹಂದಿ ಸಾಕಾ ಣಿಕೆಗೆ ಬ್ಯಾಂಕ್ ಮೂಲಕ ಸಬ್ಸಿಡಿ ಹಾಗೂ ಕಿಸಾನ್ ಕಾರ್ಡ್ ಮೂಲಕ ನೋಂದಣಿ ಮಾಡಿಸಿದ ರೈತರಿಗೆ ಮೂರು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ಸದಸ್ಯರಾದ ನಾಗೇಶ್, ರಂಗಸ್ವಾಮಿ, ಕಿರಣ್, ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್, ಪಶು ವೈದ್ಯಾಧಿಕಾರಿ ಡಾ. ಮಾದೇಶ್, ಡಾ.ಕೃಷ್ಣ, ಕೆ.ಆರ್.ಡಿ.ಸಿ.ಎಲ್ ಅಧಿಕಾರಿ ರಮೇಶ್ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗ ದವರು ಇದ್ದರು.