Advertisement

ಏಟಿಎಸ್‌ ಕಂಪನಿಯ 8 ಭದ್ರತಾ ಸಿಬ್ಬಂದಿ ಅಮಾನತು

03:20 PM May 02, 2018 | Team Udayavani |

ನಂಜನಗೂಡು: ಏಟಿಎಸ್‌ ಕಂಪನಿ 8 ಮಂದಿ ಭದ್ರತಾ ಸಿಬ್ಬಂದಿಯನ್ನು ಏಕಾಏಕಿ ಉದ್ಯೋಗದಿಂದ ಅಮಾನತುಗೊಳಿಸಿದ್ದು, ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಕಂಪನಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.  ಮರಿಸ್ವಾಮಿ, ರಂಗನಾಯಕ, ಗೋಕುಲ, ಮಹದೇವಸ್ವಾಮಿ, ಆರಾಧ್ಯ ಲಕ್ಷ್ಮೀಕಾಂತ್‌, ಎನ್‌.ಬಿ.ಶಿವರಾಜ್‌, ಎಂ.ಮಾದಯ್ಯ ಅಮಾನತುಗೊಂಡಿರುವ ಸಿಬ್ಬಂದಿ. 

Advertisement

ಇವರೆಲ್ಲರೂ ಕಳೆದ 25-30 ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಏಕಾಏಕಿ ಕೆಲಸದಿಂದ ತೆಗೆದಿದ್ದರಿಂದ ತಮ್ಮ ಕುಟುಂಬಗಳು ಬೀದಿ ಪಾಲಾಗಲಿದೆ. ಇಷ್ಟು ದಿನ ನಮ್ಮನ್ನು ದುಡಿಸಿಕೊಂಡ ಕಂಪನಿ ಈಗ ಏಕಾಏಕಿ ಕೆಲಸದಿಂದ ತೆಗೆದಿದೆ. ಇದೀಗ ಮತ್ತೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಕಂಪನಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಸಿಬ್ಬಂದಿ ಮರಿಸ್ವಾಮಿ ಎಚ್ಚರಿಸಿದರು. 

ಸಿಬ್ಬಂದಿ ಕುಟುಂಬ ಸಮೇತ ಕಂಪನಿಯ ಒಳಬಾಗಿಲಿನಲ್ಲಿಯೇ ಅಹೋರಾತ್ರಿ ಧರಣಿ ಕೈಗೊಳ್ಳುವುದಾಗಿ ಘೋಷಿಸಿ, ಏಕಾಏಕಿ  ಕೆಲಸದಿಂದ ತೆಗೆದರೆ, ನಮ್ಮ ಕುಟುಂಬಗಳ ಜೀವನ ನಿರ್ವಹಣೆ ಹೇಗೆ, ಮಕ್ಕಳು ವಿದ್ಯಾಭ್ಯಾಸಕ್ಕೇನು ಮಾಡಬೇಕೆಂದು ತಮ್ಮ ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next