Advertisement
ಜೂ.12 ರಂದು ಮೃತರಾದ ರಾಯ್ ಡಿಸೋಜ ಮೇಲೆ ಜೂ.9 ರಂದು ವಿರಾಜಪೇಟೆ ಠಾಣೆಯಲ್ಲಿ ಪೊಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎನ್ನುವ ಆರೋಪವಿದೆ.
Related Articles
Advertisement
ಕ್ರೈಸ್ತ ಸಂಘ, ಸಂಸ್ಥೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು.
ವಜಾಗೊಳಿಸಲು ಒತ್ತಾಯ :
ರಾಯ್ ಡಿಸೋಜ ಅವರ ತಾಯಿ ಮೆಟೆಲ್ಡಾ ಲೋಬೊ ಅವರು ಈ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮಗನ ಸಾವಿಗೆ ಕಾರಣಕರ್ತರಾದ ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಸಾಂತ್ವನ ಹೇಳಿದ ಮಾಜಿ ಸಿಎಂ:
ಪೊಲೀಸರ ಹಲ್ಲೆಯಿಂದ ಮೃತಪಟ್ಟ ವಿರಾಜಪೇಟೆಯ ರಾಯ್ ಡಿಸೋಜ ಅವರ ಮನೆಗೆ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮತ್ತಿತರ ಪ್ರಮುಖರು ಭೇಟಿ ನೀಡಿ ಮೃತರ ತಾಯಿ ಮೆಟೆಲ್ಡಾ ಲೋಬೊ ಹಾಗೂ ಸಹೋದರ ರಾಬಿನ್ ಡಿಸೋಜಾ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮೊಬೈಲ್ ಫೋನ್ ಮೂಲಕ ತಾಯಿಯೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದರು.
ಪೊಲೀಸರ ಅಮಾನತ್ತಾಗಿದ್ದರೂ ಹೋದ ಜೀವವನ್ನು ತಂದುಕೊಡಲು ಸಾಧ್ಯವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಚರ್ಚಿಸಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ತಾಯಿ ಮೆಟೆಲ್ಡಾ ಲೋಬೊ ಮಾತನಾಡಿ ಪುತ್ರ ರಾಯ್ ಅನುಭವಿಸಿದ ನೋವನ್ನು ಮಾಜಿ ಮುಖ್ಯಮಂತ್ರಿಗಳ ಬಳಿ ವಿವರಿಸಿ ಕಣ್ಣೀರು ಹಾಕಿದರು. ಪೊಲೀಸರನ್ನು ಅಮಾನತು ಮಾಡಿದರೆ ಸಾಲದು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಮಗ ತಪ್ಪು ಮಾಡಿದ್ದರೆ ಲಾಕ್ ಅಪ್ ನಲ್ಲಿಡಬಹುದಿತ್ತು, ಆದರೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಜೆಡಿಎಸ್ ಪದಾಧಿಕಾರಿಗಳು ಹಾಗೂ ಕ್ರೆöÊಸ್ತ ಸೇವಾ ಸಂಘದ ಕೆ.ಟಿ.ಬೇಬಿಮ್ಯಾಥ್ಯು, ಜಾನ್ಸನ್ ಪಿಂಟೋ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ರಾಯ್ ಅಂತ್ಯ ಸಂಸ್ಕಾರ:
ಪೊಲೀಸರ ಹಲ್ಲೆಯಿಂದ ಮೃತಪಟ್ಟ ರಾಯ್ ಡಿಸೋಜ ಅವರ ಅಂತ್ಯ ಸಂಸ್ಕಾರ ಇಂದು ವಿರಾಜಪೇಟೆಯಲ್ಲಿ ನಡೆಯಿತು. ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿತ್ತು.
ಅಂತ್ಯಕ್ರಿಯೆ ಸಂದರ್ಭ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು, ರೋಮನ್ ಕ್ಯಾಥೋಲಿಕ್ ಆಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಪಟ್ಟಣ ಪಂಚಾಯಿತಿ ಸದಸ್ಯ ಬೆನ್ನಿ ಅಗಸ್ಟಿನ್, ನಗರಸಭಾ ಮಾಜಿ ಸದಸ್ಯರುಗಳಾದ ಕೆ.ಜೆ.ಪೀಟರ್, ಗಿಲ್ಬರ್ಟ್ ಲೋಬೋ ಮತ್ತಿತರರು ಹಾಜರಿದ್ದು, ರಾಯ್ ಡಿಸೋಜ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.